ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯಲ್ಲಿ 2026 - 27 ಸಾಲಿನ 8 ನೇ ತರಗತಿಯ ದಾಖಲಾತಿ ಆರಂಭ
ಕಾಪು : ಕುತ್ಯಾರು ಪಂಚಾಯತ್ ವ್ಯಾಪ್ತಿಯ ಪೈಯ್ಯಾರು ಕರಿಯಣ್ಣ ಪ್ರೌಢ ಶಾಲೆಯಲ್ಲಿ 2026-2027 ಸಾಲಿನ 8 ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ.
ವಿದ್ಯಾರ್ಥಿಗಳಿಗೆ 3 ವರ್ಷದ ಸಂಪೂರ್ಣ ಉಚಿತ ಶಿಕ್ಸಣ, ಉಚಿತ ನೋಟ್ ಪುಸ್ತಕ, ಉಚಿತ ಸಮವಸ್ತ್ರ, ನುರಿತ ಅಧ್ಯಾಪಕರಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಅಗತ್ಯ ದಾಖಲೆಗಳಾದ ವಿದ್ಯಾರ್ಥಿ ಆಧಾರ್ ಕಾರ್ಡ್, ವಿದ್ಯಾರ್ಥಿ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ತಂದೆ ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್, ಆದಾಯ ಪ್ರಮಾಣ ಪತ್ರ ಜೆರಾಕ್ಸ್ ನೊಂದಿಗೆ ಕಚೇರಿಗೆ ಆಗಮಿಸಿ ದಾಖಲಾತಿ ಮಾಡಬಹುದೆಂದು ಶಾಲಾ ಮುಖ್ಯ ಶಿಕ್ಷಕರಾದ ಗಂಗಾನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿರುವರು.
ಸಂಪರ್ಕ ಸಂಖ್ಯೆ : 9611473588
