ಉಡುಪಿ : ಉಡುಪಿಯ ನಿಟ್ಟೂರಿನಲ್ಲಿರುವ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯು 1 ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಆಯೋಜಿಸಿದೆ.
ಉತ್ತಮ ರೆಸಿಡೆನ್ಷಿಯಲ್ ಮತ್ತು ಡೇ ಸ್ಕೂಲ್ಗಾಗಿ ಅಪೇಕ್ಷಿಸುವ ವಿದ್ಯಾರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಭಾನುವಾರ, ಏಪ್ರಿಲ್ 5 ರಂದು ಮಧ್ಯಾಹ್ನ 2:30 ಗಂಟೆಗೆ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆ, ಜ್ಞಾನಕಾಶಿ ಕ್ಯಾಂಪಸ್, ರಾಹೆ 66, ನಿಟ್ಟೂರು, ಪುತ್ತೂರು ಪೋಸ್ಟ್, ಉಡುಪಿ - 576105, ಇಲ್ಲಿವಿದ್ಯಾರ್ಥಿವೇತನ ಪರೀಕ್ಷೆ ನಡೆಯಲಿದೆ. ಆಸಕ್ತರು ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು. ಸಂಪರ್ಕ: 7338285811, 7795648500, 7795648501.
ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವುದು ಈ ಪರೀಕ್ಷೆಯ ಉದ್ದೇಶವಾಗಿದೆ. ವಿನಾಯಿತಿಯು ಮೊದಲಿಗೆ 85% ಅಂಕ ಪಡೆದವರಿಗೆ 30%. 65-85% ಅಂಕ ಪಡೆದವರಿಗೆ 20% ವಿನಾಯಿತಿ. ಹಾಗೂ 35-65% ಅಂಕ ಪಡೆದವರಿಗೆ (ಪಾಸಾದವರು) 15% ವಿನಾಯಿತಿ ಸಿಗಲಿದೆ.
ಯಾವುದೇ ಮೌಲ್ಯಮಾಪನ ಮಂಡಳಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆರೆದಿರುತ್ತದೆ. ಯಾವುದೇ ನೋಂದಣಿ ಶುಲ್ಕ ಅಥವಾ ದಾಖಲೆಗಳ ಅಗತ್ಯವಿಲ್ಲ. ವಿದ್ಯಾರ್ಥಿಗಳು ಕೇವಲ ಬರವಣಿಗೆ ಸಾಮಗ್ರಿಗಳನ್ನು ತಂದು ಪರೀಕ್ಷೆ ಬರೆಯಬೇಕು. ಪರೀಕ್ಷೆಯ ಫಲಿತಾಂಶಗಳನ್ನು ಅದೇ ದಿನ ಘೋಷಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
