ಕಾಪು : ಶ್ರೀ ದುರ್ಗಾದೇವಿ ಮಹಿಳಾ ಮಂಡಳಿ ಪಡುಕುತ್ಯಾರು 2026-29 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಕಾಪು : ಶ್ರೀ ದುರ್ಗಾದೇವಿ ಮಹಿಳಾ ಮಂಡಳಿ
ಶ್ರೀ ದುರ್ಗಾದೇವಿ ಮಂದಿರ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಪಡುಕುತ್ಯಾರು, ಕಾಪು ಇದರ 2026-29 ರ ಸಾಲಿನ ನೂತನ ಅಧ್ಯಕ್ಷರಾಗಿ ದೀಕ್ಷಿತಾ ಜೀತೇಶ್ ಆಯ್ಕೆಯಾಗಿದ್ದಾರೆ.
ಮಾ.19ರಂದು ಶ್ರೀ ದುರ್ಗಾ ಮಂದಿರ, ಪಡುಕುತ್ಯಾರಿನ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಜರಗಿದ ಶ್ರೀ ದುರ್ಗಾದೇವಿ ಮಹಿಳಾ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹೇಮ ಪ್ರಕಾಶ್ ಆಚಾರ್ಯ,
ಕಾರ್ಯದರ್ಶಿಯಾಗಿ ಶಾಲಿನಿ ರತ್ನಾಕರ್ ಆಚಾರ್ಯ, ಕೋಶಾಧಿಕಾರಿಯಾಗಿ ಜಯಶ್ರೀ ಪ್ರವೀಣ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಸುಷ್ಮಾ ಉದಯ ಆಚಾರ್ಯರವರು ಆಯ್ಕೆಗೊಂಡಿರುತ್ತಾರೆ.
