ಬಂಟಕಲ್ಲ್ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಣೆ
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದ ಸನ್ನಿವೇಶದಲ್ಲಿ ಮಕ್ಕಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿದ್ದು ಮೊಬೈಲ್ ಸೌಲಭ್ಯಗಳು ವಂಚಿತ ಮಕ್ಕಳಿಗೆ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ದಾನಿಗಳ ನೆರವಿನಿಂದ ಬಂಟಕಲ್ಲ್ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಿಸಲಾಯಿತು.
ಮುಂದಿನ ದಿನಗಳಲ್ಲಿ ದಾನಿಗಳ ನೆರವಿನಿಂದ ಮತ್ತಷ್ಟು ವಿದ್ಯಾರ್ಥಿಗಳಿಗೆ ನೆರವನ್ನು ನೀಡಲಿದ್ದೇವೆ ಎಂದು ಲಯನ್ಸ್ ಕ್ಲಬ್ ಬಂಟಕಲ್ಲ್ ಅಧ್ಯಕ್ಷರಾದ ವಿಜಯ್ ಧೀರಜ್ ತಿಳಿಸಿದರು.
ನಾಗಿರಕ ಸಮಿತಿಯ ಅಧ್ಯಕ್ಷರಾದ ರಾಮರಾಯ ಮೊಬೈಲ್ ಅನುಕೂಲತೆ ಮತ್ತು ಅನನುಕೂಲತೆಗಳ ಬಗ್ಗೆ ತಿಳಿಸಿದರು.
ಈ ಸಂದರ್ಭ ಲಯನ್ಸ್ ಕ್ಲಬ್ ಬಂಟಕಲ್ಲ್ ನ ಕಾರ್ಯದರ್ಶಿ ಅರುಂದತಿ ಪ್ರಭು ಉಪಸ್ಥಿತರಿದ್ದರು
