ಸ್ನೇಹ ಜೀವಿಯಿಂದ ನವರಾತ್ರಿತಿಳಿವು, ಗೌರವಾರ್ಪಣೆ , ಶುಭಹಾರೈಕೆ
ಕಟಪಾಡಿ : ಉಡುಪಿಯ ಗಣೇಶ ರಾವ್ ಎಲ್ಲೂರು ಇವರ ಸಾರಥ್ಯದ ಕಲೆ , ಸಾಹಿತ್ಯ , ಸಂಸ್ಕೃತಿಗಾಗಿ ಸೇವೆ ಸಲ್ಲಿಸುತ್ತಿರುವ. "ಸ್ನೇಹ ಜೀವಿ ಉಡುಪಿ" ಸಂಸ್ಥೆಯು ತನ್ನ ಯಕ್ಷಗಾನ - ನಾಟಕ ರಂಗಭೂಮಿಯ ವಿದ್ಯಾರ್ಥಿಗಳಿಗಾಗಿ ನವರಾತ್ರಿ ಆಚರಣೆಯ ಮಹತ್ವದ ಕುರಿತು ಉಪನ್ಯಾಸ ಹಾಗೂ ಹಿರಿಯ ಕಲಾವಿದರಿಗೆ ಗೌರವಾರ್ಪಣೆ , ವಿದ್ಯಾರ್ಥಿಗಳಿಬ್ಬರ ಹುಟ್ಟುಹಬ್ಬವನ್ನು ಕಟಪಾಡಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿತ್ತು .
ಈ ಸಂದರ್ಭದಲ್ಲಿ ಎಲ್ಲೂರಿನ ಹಿರಿಯ ಯಕ್ಷಗಾನ ಸಂಘಟಕ, ವೇಷಧಾರಿ ಶ್ರೀನಿವಾಸ ಉಪಾಧ್ಯಾಯ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ದೇವಸ್ಥಾನದ ಪ್ರಭಂದಕರಾದ ರಮೇಶ್ ಆಚಾರ್ಯ ಮತ್ತು ದೇವಸ್ಥಾನದ. ಸಿಬ್ಬಂದಿ ಶ್ರೀಮತಿ ಲೀಲಾ ಇವರನ್ನು ಅಭಿನಂದಿಸಲಾಯಿತು.ವಿದ್ಯಾರ್ಥಿಗಳಾದ ಸಂಗೀತಾ ಮತ್ತು ಸಂಧ್ಯಾ ಅವರ ಹುಟ್ಟು ಹಬ್ಬವನ್ನು ಆಚರಿಸಿ ಶುಭ ಹಾರೈಸಲಾಯಿತು .
ಗುರುಗಳಾದ ,ಜಾನಪದ ಸಂಶೋಧಕ , ಹಾಗೂ ಸಾಹಿತಿ ಕೆ. ಎಲ್ . ಕುಂಡತಾಯ ಇವರು ವಿದ್ಯಾರ್ಥಿಗಳಿಗೆ ನವರಾತ್ರಿಯ ಬಗ್ಗೆ ಉಪನ್ಯಾಸ ನೀಡಿದರು. ಹೆತ್ತ ಅವ್ವೆ ಯಿಂದ ನೆಲದವ್ವೆಯನ್ನು ಅರಿತು ಮುಂದೆ ಜಗದವ್ವೆಯನ್ನು ಕಾಣುವುದೇ ಮಾತೃ - ಪ್ರಕೃತಿ - ಶಕ್ತಿ ಆರಾಧನೆಯ ಮೂಲ ಎಂದು ವಿವರಿಸಿದರು.
ಪ್ರಕಾಶ್ ಆಚಾರ್ಯ ಇನ್ನಂಜೆ ,ಹರೀಶ್ ಆಚಾರ್ಯ ಕಳತ್ತೂರು, ಆಲ್ವಿನ್ ಪ್ರಕಾಶ್ ಮೇನೇಜಸ್ ಶ್ರೀಮತಿ ಲಕ್ಷ್ಮೀ , ಶ್ರೀಮತಿ ಶಾಂತಿ ಶ್ರೀದರ್ ಮೊದಲಾದವರು ಉಪಸ್ಥಿತರಿದ್ದರು .ಕುಮಾರಿ ಸಂದ್ಯಾ ,ಸಂಗೀತಾ , ಪ್ರಜ್ಞಾ ಪ್ರಾರ್ಥಿಸಿ, ಗಣೇಶ ರಾವ್ ಎಲ್ಲೂರು ಪ್ರಾಸ್ತಾವಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ರಂಜಿತ್ ಭಂಡಾರಿ ವಂದಿಸಿದರು.
