ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಸಮ್ಮುಖದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳಿಂದ ಶ್ರೀ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಇವರಿಗೆ ಸನ್ಮಾನ
Thumbnail
ಬ್ಯಾಂಕ್ ಆಫ಼್ ಇಂಡಿಯಾದ ಅನ್ನ ಪೂರ್ಣೇಶ್ವರೀ ಕ್ಯಾಟರರ್ಸ್ ನ ಮಾಲಕರಾದ ಆನಂದ್ ಶೇಟ್ ಅವರ ಉಪಹಾರಗ್ರಹದಲ್ಲಿ ಇತ್ತೀಚೆಗೆ ದೇಶದಾದ್ಯಂತ ಕೊರೋನಾ ಮಹಾಮಾರಿ ವಕ್ಕರಿಸಿದ ಹಿನ್ನಲೆ ಲಾಕ್ ಡೌನ್ ಎಂಬ ಅಸ್ರ್ತದಿಂದ ಜನರು ಕಂಗಾಲಾಗಿ ಹೊಟ್ಟೆಗೆ ಹಿಟ್ಟಿಲ್ಲದ ಪರಿಸ್ಥಿತಿಯ ಸಂದರ್ಭ ಮಾರ್ಚ್23ರಿಂದ ಲಾಕ್ ಡೌನ್ ಮುಗಿಯುವವರೆಗೂ ಫ಼ೋರ್ಟ್ ನ ಬ್ಯಾಂಕ್ ಆಫ಼್ ಇಂಡಿಯಾದ ಎಲ್ಲಾ ಸಿಬ್ಬಂಧಿಗಳಿಗೂ ಒಳ್ಳೆಯ ರೀತಿಯ ಊಟ ಉಪಚಾರ ನೀಡಿ ಸಹಕರಿಸಿದ ಶ್ರೀ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಇವರನ್ನು ಬ್ಯಾಂಕ್ ಮ್ಯಾನೇಜರ್ ಜಾನ್ಸಲ್ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಹಾಗೂ ದಿಲ್ಲಿಯಿಂದ ಆಗಮಿಸಿದ ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಇವರ ಉಪಸ್ಥಿತಿಯಲ್ಲಿ ಪ್ರೀತಿಪೂರ್ವಕವಾಗಿ ಸನ್ಮಾನಿಸಿದರು. ಹಲವಾರು ವರ್ಷಗಳಿಂದ ಬ್ಯಾಂಕ್ ಆಫ಼್ ಇಂಡಿಯಾದ ಕ್ಯಾಂಟೀನ್ ಉದ್ಯಮವನ್ನು ನಡೆಸುತ್ತಾ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ,ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ಇನ್ನಂಜೆ ಶ್ರೀ ಚಂದ್ರಹಾಸ್ ಗುರುಸ್ವಾಮಿಯವರು ಹಲವಾರು ಶಿಷ್ಯವೃಂದವನ್ನೂ ಹೊಂದಿದ್ದಾರೆ.ಲಾಕ್ ಡೌನ್ ಸಮಯದಲ್ಲಿ ತನ್ನ ಉದ್ಯಮವಾದ ಬ್ಯಾಂಕ್ ಆಫ಼್ ಇಂಡಿಯಾ ಉಪಹಾರ ಗ್ರಹದಲ್ಲಿ ಸಿಲುಕಿರುವ ಬ್ಯಾಂಕ್ ಸಿಬ್ಬಂದಿಗಳಿಗೆ ಊಟೋಪಚಾರ ನೀಡುವುದರ ಮೂಲಕ ಇವರ ಈ ಸೇವೆಗೆ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಇವರನ್ನು ಸನ್ಮಾನಿಸಿದ್ದಾರೆ.ದಿಲ್ಲಿಯಿಂದ ಆಗಮಿಸಿದ ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಕೂಡ ಈ ಹೊತ್ತಿನಲ್ಲಿ ಉಪಸ್ಥಿತರಿದ್ದು ಇವರ ಈ ಕಾರ್ಯಕ್ಕೆ ಸನ್ಮಾನಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
30 Oct 2020, 08:16 PM
Category: Kaup
Tags: