ಉಡುಪಿಯ ಸ್ವಚ್ಛ ಭಾರತ್ ತಂಡ ಈ ಬಾರಿಯ ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ
Thumbnail
ಕಳೆದ ಆರು ವರ್ಷಗಳಿಂದ ಸ್ವಚ್ಛ ಭಾರತ, ಸ್ವಸ್ಥ ಭಾರತ, ಗ್ರಾಮ ಭಾರತ ಮತ್ತು ಡಿಜಿಟಲ್ ಭಾರತ ಎಂಬ ನಾಲ್ಕು ವಿಭಾಗಗಳ ಅಡಿಯಲ್ಲಿ ಪೂರಕವಾದ ಯೋಜನೆಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ನಿರಂತರವಾಗಿ 50 ವಾರಗಳ ಕಾಲ ಪ್ಲಾಸ್ಟಿಕ್ ವಿರೋಧಿ ಅಭಿಯಾನವನ್ನು ಮಲ್ಪೆ ಹಾಗೂ ಹೂಡೆ ಕಡಲ ತೀರದಲ್ಲಿ ನಡೆಸಿದೆ.ಅಜ್ಜರಕಾಡು ಉದ್ಯಾನವನವನ್ನು ದಾನಿಗಳ ಸಹಾಯದಿಂದ ಅಭಿವೃದ್ಧಿ ಪಡಿಸುವ ಕಾಯ೯ ನಡೆಸಿದೆ. ಚೆನ್ನೈ ಚಂಡಮಾರುತ, ಮಡಿಕೇರಿ ಭೂಕುಸಿತ, ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡದಲ್ಲಿ ಸಂಭವಿಸಿದ ನೆರೆಯ ಸಂದರ್ಭದಲ್ಲಿ ಈ ತಂಡ ಸ್ಥಳಕ್ಕೆ ಅಧಿಕಾರಿಗಳ ಜೊತೆಗೆ ತೆರಳಿ ಅಗತ್ಯ ಪರಿಹಾರವನ್ನು ದಾನಿಗಳ ನೆರವಿನಿಂದ ನೀಡಿದೆ. ಸಂಚಾಲಕರಾಗಿ ಗಣೇಶ್ ಪ್ರಸಾದ್ ನಾಯಕ್ ಅದೇ ರೀತಿ ಸಂಯೋಜಕರಾಗಿ ರಾಘವೇಂದ್ರ ಪ್ರಭು, ಕವಾ೯ಲು ಕಾಯ೯ ನಿವ೯ಹಿಸುತ್ತಿದ್ದಾರೆ.
30 Oct 2020, 08:26 PM
Category: Kaup
Tags: