ಶಿರ್ವ ಕಲ್ಲು ಸಾಗಾಟದ ಟೆಂಪೋ ಪಲ್ಟಿ - ಚಾಲಕ ಆಸ್ಪತ್ರೆಗೆ ದಾಖಲು
ಶಿರ್ವ ಸೈಂಟ್ ಮೇರಿಸ್ ಶಾಲಾ ಸಮೀಪದಲ್ಲಿ ಶಿರ್ವದಿಂದ ಕಟಪಾಡಿ ಕಡೆಗೆ ಕಲ್ಲು ಸಾಗಿಸುತ್ತಿದ್ದ ಟೆಂಪೋವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಟೆಂಪೋ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು.
ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
