ಕಷ್ಟದಲ್ಲಿ ನೇರವಾದ ಕಾಪು ಪೊಲೀಸ್ ಗೆ ಮೊಮ್ಮಗನ ಮದುವೆಯಲ್ಲಿ ಸಮ್ಮಾನಿಸಿದ ಅಜ್ಜಿ
Thumbnail
ಕಾಪು ಪೊಲೀಸ್ ಠಾಣಾ ಹೆಡ್ ಕಾನ್ಸ್ ಟೇಬಲ್ ಸುಧಾಕರ ಭಂಡಾರಿ ಇವರು COVID 19 ಕೊರೊನಾ ಪಾಸಿಟಿವ್ ಬಂದು ಜುಲೈ 17 ರಂದು ಉಡುಪಿ ಯ TMA pai ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿದ್ದರು. ಅದೇ ವೇಳೆ ಸಾಸ್ತನದ ಎಡಬೆಟ್ಟು ಚೆಂಪಿಯ ನಿವೃತ್ತ VO ಗೋಪಾಲ ಆಚಾರ್ಯ ರವರ ಕುಟುಂಬದ ಸದಸ್ಯರು ಅದೇ ಹಾಸ್ಪಿಟಲ್ ನಲ್ಲಿ ದಾಖಲಾಗಿ ಕುಟುಂಬದ ಎಲ್ಲಾ ಸದಸ್ಯರು ಗುಣಮುಖರಾಗಿ ಹೋಗುವ ವೇಳೆ ಗೋಪಾಲ ಆಚಾರ್ಯ ರವರ ತಾಯಿಯವರಾದ ಶ್ರೀ ಮತಿ ಜಾನಕಿ ಆಚಾರ್ತಿ (87 ವರ್ಷ ) ರವರನ್ನು ಇನ್ನು ಮೂರು ದಿನಗಳ ಕಾಲ ಅಸ್ವತ್ರೆಯಲ್ಲಿ ಉಳಿಯುವಂತೆ ವೈದ್ಯರು ತಿಳಿಸಿದಾಗ ಕಂಗಾಲಾದ ಗೋಪಾಲ ಆಚಾರ್ಯ ರವರಿಗೆ ಕಾಪು ಠಾಣಾ ಸುಧಾಕರ ರವರು ಜಾನಕಿ ರವರನ್ನು ಮೂರು ದಿನಗಳ ವರೆಗೆ ನಾನು ನೋಡಿಕೊಳ್ಳುವುದಾಗಿ ಧೈರ್ಯ ಹೇಳಿದರು. ಮೂರು ದಿನಗಳ ವರೆಗೆ ಅವರೊಂದಿಗಿದ್ದು ದಿನಾಂಕ 23/07/2020 ರಂದು Discharge ಮಾಡಿಸಿದರು. ನಂತರ ಅವರನ್ನು 4 ನೇ ಮಹಡಿಯ ಅಸ್ವತ್ರೆ ಯಿಂದ ಹೊರಗೆ ಕರೆದು ಕೊಂಡು ಬಂದು ಮನೆಯವರಿಗೆ ಒಪ್ಪಿಸಿದರು. ಕಷ್ಟ ಕಾಲದಲ್ಲಿ ತನಗೆ ಸಹಕರಿಸಿದ ಸುಧಾಕರ್ ಅವರನ್ನು ಶ್ರೀಮತಿ ಜಾನಕಿರವರು ನೆನಪಿನಲ್ಲಿ ಇರಿಸಿಕೊಂಡು 3 ತಿಂಗಳ ನಂತರ ಸ್ವತಃ ತಾನೇ ಕರೆ ಮಾಡಿ ದಿನಾಂಕ 30/10/2020 ರಂದು ನಡೆಯಲಿದ್ದ ತನ್ನ ಮೊಮ್ಮಗ ನಿತೀಶ್ ಆಚಾರ್ಯ ರವರ ಮದುವೆಗೆ ಆಹ್ವಾನಿಸಿ ಮದುವೆ ಸಮಾರಂಭದ ನಡುವೆ ಸುಧಾಕರ ರವರು ಮಾಡಿದ 3 ದಿನದ ಸೇವೆ ಗೆ ಸಮ್ಮಾನ ಮಾಡಿ ನೀನು ಕೂಡಾ ನನ್ನ ಮಗನೆ ಎಂದು ಆಶೀರ್ವದಿಸಿರುತ್ತಾರೆ.
Additional image Additional image
31 Oct 2020, 12:44 PM
Category: Kaup
Tags: