ನಿವೃತ್ತ ಉಪ ತಹಶೀಲ್ದಾರ್ ವೈ. ಭುಜಂಗ ಆಚಾರ್ಯ ನಿಧನ
Thumbnail
ಎಲ್ಲೂರು:ನಿವೃತ್ತ ಉಪತಹಶೀಲ್ದಾರ್ ವೈ. ಭುಜಂಗ ಆಚಾರ್ಯ (83) ಆವರು ಅಲ್ಪಕಾಲದ ಅಸೌಖ್ಯದಿಂದ ಎಲ್ಲೂರು ಕಂಚುಗರಕೇರಿಯ ಸ್ವಗೃಹ ಶ್ರೀ ದುರ್ಗಾಕೃಪಾದಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದರು. ಬೆಳಪು ವ್ಯವಸಾಯ ಸಹಕಾರಿ ಸಂಘದ ಪಣಿಯೂರು ಇದರ ಮಾಜಿ ಅಧ್ಯಕ್ಷರಾಗಿ, ಎಲ್ಲೂರು ವಿಶ್ವಕರ್ಮ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಆಳಿಯ, ಅಪಾರ ಬಂಧುಮಿತ್ರರನ್ನು ಅಗಲಿರುತ್ತಾರೆ. ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ, ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಹಿತ ಅನೇಕ ಗಣ್ಯರು ಸಂತಾಪವನ್ನು ವ್ಯಕ್ತಪಡಿಸಿರುತ್ತಾರೆ.
06 Nov 2020, 05:21 PM
Category: Kaup
Tags: