ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು : ರಾಘವೇಂದ್ರ ಪ್ರಭು,ಕವಾ೯ಲುಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
Thumbnail
ಉಡುಪಿ. :- ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ನ .22 ರಂದು ಯಲಹಂಕ ಉಪನಗರ ಪ್ರಖ್ಯಾತಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಗೌರವ ಕಾಯ೯ಕ್ರಮದಲ್ಲಿ ಸಾಮಾಜಿಕ ಕಾಯ೯ಕತ೯ ತರಬೇತಿದಾರ ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಸಾಮಾಜಿಕ ಸೇವೆ ಮತ್ತು ಯುವ ಸಂಘಟನೆ ವಿಭಾಗದಲ್ಲಿ " ಕನ್ನಡ ರಾಜ್ಯೋತ್ಸವ " ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವಚ್ಛ ಭಾರತ ಫ್ರೆoಡ್ಸ್ ಸಂಯೋಜಕರಾಗಿರುವ ಇವರು ಅನೇಕ ಸಮಾಜಮುಖಿ ಕಾಯ೯ದಲ್ಲಿ ತೊಡಗಿಸಿಕೊಂಡಿದ್ದಾರೆ.ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂತಿ೯ ಅರಳಿ ನಾಗರಾಜ್, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್, ಗುಣವಂತ ಮಂಜು ಮೊದಲಾದವರು ಉಪಸ್ಥಿತರಿದ್ದರು.
22 Nov 2020, 02:25 PM
Category: Kaup
Tags: