ಕುತ್ಯಾರು ವೀರಭದ್ರ ದೇವಸ್ಥಾನ : ದೀಪೋತ್ಸವ
Thumbnail
ಕುತ್ಯಾರು ಅರಮನೆಯ ಆಡಳಿತಕ್ಕೊಳಪಟ್ಟ ಇತಿಹಾಸ ಪ್ರಸಿದ್ಧ ಕುತ್ಯಾರು ವೀರಭದ್ರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್ ರವರ ಮುಂದಾಳತ್ವದಲ್ಲಿ, ಕೇಂಜ ಶ್ರೀಧರ ತಂತ್ರಿಯವರ ಉಪಸ್ಥಿತಿಯಲ್ಲಿ, ಕುತ್ಯಾರು ರಾಮಕೃಷ್ಣ ತಂತ್ರಿ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸ್ಥಳೀಯ ಭಜನಾ ತಂಡದಿಂದ ಭಜನೆ ಮತ್ತು ಅನ್ನದಾನವು ನೆರವೇರಿತು. ಈ ಸಂದರ್ಭ ಅರಮನೆಯ ಸ್ಮಿತಾ ಜಿನೇಶ್ ಬಲ್ಲಾಳ್ ಮತ್ತು ಮಕ್ಕಳು, ನವೀನ್ ಶೆಟ್ಟಿ, ಸತೀಶ್ ಕುತ್ಯಾರು, ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಧೀರಜ್ ಶೆಟ್ಟಿ, ಅಶೋಕ್ ಗೌಡ, ಪ್ರವೀಣ್ ಭಂಡಾರಿ, ಶ್ರೀಧರ ಕುಲಾಲ್, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಆಚಾರ್ಯ, ಸಂಪತ್ ಕುಮಾರ್ ಕೇಂಜ ಮೊದಲಾದವರು ಉಪಸ್ಥಿತರಿದ್ದರು.
Additional image
01 Dec 2020, 11:15 AM
Category: Kaup
Tags: