ಬಿರುವೆರ್ ಕುಡ್ಲ : ಪೊರ್ಲು ಬಾಲೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
Thumbnail
ಬಿರುವೆರ್ ಕುಡ್ಲ(ರಿ)ಫ್ರೆಂಡ್ಸ್ ಬಳ್ಳಾಲ್ ಬಾಗ್ ಇದರ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ(ರಿ) ಉಡುಪಿ ಘಟಕ" ಹಾಗೂ ಮಹಿಳಾ ವೇದಿಕೆ ಆಯೋಜಿಸಿದ್ದ ಬಿರುವೆರ್ ಕುಡ್ಲ ಪೊರ್ಲುಬಾಲೆ ಸ್ಪರ್ಧೆಯಲ್ಲಿ ವಿಜೇತರಾದ ಮುದ್ದು ಕಂದಮ್ಮಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಕು.ನಿಖಿತಾಳಿಗೆ ಸನ್ಮಾನ ಕಾರ್ಯಕ್ರಮ ನಿನ್ನೆ ಹಿಂದಿ ಪ್ರಚಾರ ಸಮಿತಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಉಡುಪಿ ಘಟಕದ ಅಧ್ಯಕ್ಷರಾದ ಕಿಶೋರ್ ಪೂಜಾರಿ, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಉಮೇಶ್ ಕೋಟ್ಯಾನ್, ಸಂಘಟನೆಯ ಜಿಲ್ಲಾ ವಕ್ತಾರರಾದ ಲಕ್ಷ್ಮೀಶ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷರಾದ ಸುನೀತಾ ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಯಾಗಲು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಎಲ್ಲಾ ಮುದ್ದು ಕಂದಮ್ಮಗಳ ಜೊತೆ ಪೋಷಕರೂ ಕೂಡ ಭಾಗವಹಿಸಿದ್ದರು.
Additional image
02 Dec 2020, 07:15 AM
Category: Kaup
Tags: