ಇನ್ನಂಜೆ : ನೆರವಿನ ನಿರೀಕ್ಷೆಯಲ್ಲಿ ರಾಘವೇಂದ್ರ ಶೆಟ್ಟಿ ಕುಟುಂಬ
Thumbnail
ಇನ್ನಂಜೆ ಮಂಡೇಡಿ ಮೂಡು ಮೇಲ್ಮನೆ ಕಿಟ್ಟಿ ಶೆಟ್ಟಿಯ ಮಗನಾದ ರಾಘವೇಂದ್ರ ಶೆಟ್ಟಿ (ರಾಘು) ಕಳೆದ ಹದಿನೈದು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮುಂಬೈಯಲ್ಲಿ ದುಡಿಯುತ್ತಿದ್ದರು. ಕಳೆದ ಒಂದು ವರ್ಷದಿಂದ ತನ್ನ ಮಗುವಿನ ಅನಾರೋಗ್ಯ ಕಾರಣದಿಂದಾಗಿ ಊರಿನಲ್ಲಿ ಇದ್ದು ಮಗುವಿನ ಆರೋಗ್ಯ ಸುಧಾರಣೆಗಾಗಿ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಇವರ ದುರಾದೃಷ್ಟವೆಂಬಂತೆ ಈಗ ರಾಘವೇಂದ್ರ ಶೆಟ್ಟಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಅನ್ನನಾಳದಲ್ಲಿ ಗೆಡ್ಡೆಯಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ಆರು ಲಕ್ಷದವರೆಗೆ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈ ಕಾರಣದಿಂದ ಈ ಕುಟುಂಬವು ಕಂಗಾಲಾಗಿದೆ. ಒಂದೆಡೆ ಮಗುವಿನ ಚಿಕಿತ್ಸಾ ವೆಚ್ಚ ಮತ್ತೊಂದೆಡೆ ರಾಘವೇಂದ್ರ ಶೆಟ್ಟಿಯವರ ಚಿಕಿತ್ಸಾ ವೆಚ್ಚಕ್ಕೆ ಖರ್ಚು ಮಾಡಬೇಕಾಗಿದೆ. ಸಹೃದಯಿ ದಾನಿಗಳು ಈ ಕುಟುಂಬಕ್ಕೆ ನೆರವಾಗಬೇಕೆಂದು ವಿನಂತಿಸಿದ್ದಾರೆ. ವಿಳಾಸ: ರಾಘವೇಂದ್ರ ಎಮ್. ಶೆಟ್ಟಿ S/O ಮೋನಪ್ಪ ಶೆಟ್ಟಿ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ : 0636101016370 IFSC Code : CNRB0000636 ಶಂಕರಪುರ ಶಾಖೆ ಉಡುಪಿ ಜಿಲ್ಲೆ, ಕಾಪು ತಾಲೂಕು MOb. NO : 7715951795
05 Dec 2020, 09:28 AM
Category: Kaup
Tags: