ಕಾಪು ಕಾಳಿಕಾಂಬಾ ದೇವಸ್ಥಾನದಲ್ಲಿ ರಾಜ್ಯಮಟ್ಟದ ಸರಸ್ವತೀ ಪ್ರಶಸ್ತಿ ಪುರಸ್ಕೃತೆ ವೈ.ಯು.ಯಶಸ್ವಿ ಆಚಾರ್ಯಳಿಗೆ ಸನ್ಮಾನ
ಕಾಪು : ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.98.24 ಅಂಕಗಳೊಂದಿಗೆ ದಾವಣಗೆರೆಯಲ್ಲಿ ಸರಸ್ವತೀ ಪುರಸ್ಕಾರ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಸಾಧಕಿ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ವೈ.ಯು. ಯಶಸ್ವಿ ಆಚಾರ್ಯಳಿಗೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಡಿ.5ರಂದು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆ. ಉಮೇಶ್ ತಂತ್ರಿ ಮಂಗಳೂರು, ಅಡಳಿತ ಮೊಕ್ತೇಸರ ಶೇಖರ ಆಚಾರ್ಯ, 2ನೇ ಮೊಕ್ತೇಸರ ಅಚ್ಚುತ ಆಚಾರ್ಯ, 3ನೇ ಮೊಕ್ತೇಸರ ಗಂಗಾಧರ ಆಚಾರ್ಯ ದಿಂಡಿಬೆಟ್ಟು, ಅಡಳಿತ ಮಂಡಳಿ, ಕ್ಷೇತ್ರದ ಪ್ರಧಾನ ಅರ್ಚಕ ಭಾಸ್ಕರ್ ಪುರೋಹಿತ್, ಯಶಸ್ವಿ ಆಚಾರ್ಯಳ ಪೋಷಕರು ವೈ. ಉಮೇಶ್ ಆಚಾರ್ಯ, ಶೀಲಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
