ಕ್ರಿಸ್ಮಸ್ ವೃಕ್ಷದೊಂದಿಗೆ ಸೆಲ್ಫಿ : ಫೊಟೋ ಸ್ಪರ್ಧೆ
Thumbnail
ಕಾಪು : ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕುರ್ಕಾಲು ಯುವಕ ಮಂಡಲದಿಂದ ಕ್ರಿಸ್ಮಸ್ ವೃಕ್ಷದೊಂದಿಗೆ ಸೆಲ್ಫಿ ಫೋಟೋ ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ ₹ 1,000 ಎರಡನೇ ಬಹುಮಾನ ₹750 ಮತ್ತು 3 ಸಮಾಧಾನಕರ ಬಹುಮಾನ ₹500 ಇರಲಿದೆ. ಸ್ಪರ್ಧೆಯ ನಿಯಮಗಳು ಇಂತಿವೆ : ತಮ್ಮ ಫೋಟೋವನ್ನು ಕೆಳಗೆ ನಮೂದಿಸಿದ ಯಾವುದೇ ಮೊಬೈಲ್ ಸಂಖ್ಯೆಗೆ ವಾಟ್ಸ್ಆಪ್ ಮಾಡಬಹುದು. ಸ್ಪರ್ಧಾಳುಗಳು ತಮ್ಮ ಪೂರ್ಣ ಹೆಸರು,ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ಸ್ಪರ್ಧಿಯು ಕೇವಲ ಒಂದು ಫೋಟೋವನ್ನು ಮಾತ್ರ ಕಳುಹಿಸಲು ಅವಕಾಶ. ಸ್ಪರ್ಧೆಯಲ್ಲಿ ಭಾಗವಹಿಸುವ ವ್ಯಕ್ತಿಯು ಫೋಟೋದಲ್ಲಿ ಇರಬೇಕು. ಈ ಸ್ಪರ್ಧೆಯು ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಎಲ್ಲರಿಗೂ ಮುಕ್ತ ಅವಕಾಶ. ಡಿಸೇಂಬರ್ 24 ರಿಂದ 26 ಸಂಜೆ 6 ಗಂಟೆಯ ಒಳಗೆ ಮಾತ್ರ ಫೋಟೋ ಕಳುಹಿಸಲು ಅವಕಾಶ. ಸ್ಪರ್ಧೆಯಲ್ಲಿ ವಿಶೇಷವಾಗಿ ಕ್ರಿಸ್‌ಮಸ್ ವೃಕ್ಷದ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಿಮ್ಮ ಫೋಟೋಗಳನ್ನು ಈ ಕೆಳಗಿನ ಯಾವುದೇ ವಾಟ್ಸಪ್ ನಂಬರಿಗೆ ಕಳುಹಿಸಬಹುದಾಗಿದೆ. ಎಂದು ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ. ರಾಯನ್ ಫೇರ್ನಾಂಡಿಸ್ 7760718898 ಸಂತೋಷ್ ಶೆಟ್ಟಿ 9980970615 ಸುವಿತ್ ಶೆಟ್ಟಿ 8150025768 ಕಿರಣ್ ಪೂಜಾರಿ 9902424715 ಪ್ರಶಾಂತ್ ಪೂಜಾರಿ 9535866383 ಆಕಾಶ್ ಪೂಜಾರಿ 9538016764
Additional image
08 Dec 2020, 04:32 PM
Category: Kaup
Tags: