ಬಂಟಕಲ್ಲು ದಿ. ಬಿ ರಾಮಚಂದ್ರ ಪ್ರಭು ಶ್ರದ್ಧಾಂಜಲಿ - ನುಡಿ ನಮನ ಕಾರ್ಯಕ್ರಮ
ಕಳೆದ ಶುಕ್ರವಾರದಂದು ನಿಧನರಾದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪದಾಯರಾಗಿದ್ದ ಪಂಜಿಮಾರು ಕುರುಡೈ ರಾಮಚಂದ್ರ ಪ್ರಭುರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮವು ಶಾಲಾ ಆಡಳಿತ ಮಂಡಳಿ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬಂಟಕಲ್ಲು2 ಶಾಲೆಯಲ್ಲಿ ನಡೆಯಿತು.
ವೇದಿಕೆಯಲ್ಲಿದ್ದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಶ್ರೀ ಶಶಿಧರ ವಾಗ್ಲೆ, ಶಾಲಾ ಸಂಚಾಲಕ ಶ್ರೀ ಜಯರಾಮ್ ಪ್ರಭುರವರು ರಾಮಚಂದ್ರ ಪ್ರಭುಗಳವರ 32 ವರ್ಷಗಳ ಸೇವೆಯನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಕೋರಿ ನುಡಿನಮನ ಸಲ್ಲಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವನಾಥ ಪ್ರಭು ಕೇಂಜ, ಹಿರಿಯ ನಿವೃತ್ತ ಶಿಕ್ಷಕಿ ಶ್ರೀಮತಿ ಲೀಲಾವತಿ ಪಾಟ್ಕರ್, ಶಾಲಾ ದಾನಿಗಳಾದ ಶ್ರೀ ಲುವಿಸ್ ಮಾರ್ಟೀಸ್ ಬಂಟಕಲ್ಲು, ಶ್ರೀ ರಾಮಚಂದ್ರ ನಾಯಕ್ ಪಡುಬೆಳ್ಳೆ, ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀ ವಿಜಯ್ ಧೀರಜ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಾವಣ್ಯವತಿ ಬಾಯಿ, ನಾಗರೀಕ ಸೇವಾ ಸಮಿತಿ ಬಂಟಕಲ್ಲು ಇದರ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗ, ವಿಶ್ವಕರ್ಮ ಸಂಘದ ಕಾರ್ಯದರ್ಶಿ ಶ್ರೀ ಜಗದೀಶ ಆಚಾರ್ಯ, ಹಳೇವಿದ್ಯಾರ್ಥಿ ಶ್ರೀ ವೀರೇಂದ್ರ ಶೆಟ್ಟಿ, ರಾಜಾಪುರ ಸಾರಸ್ವತ ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೆಲ್ಕರ್, ದಿವಂಗತ ರಾಮಚಂದ್ರ ಪ್ರಭುರವರ ಸುಪುತ್ರ ಶ್ರೀನಿಧಿ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಳೇವಿದ್ಯಾರ್ಥಿಗಳಾದ ಹಾಗೂ ದಿ. ಪ್ರಭುಗಳ ಶಿಷ್ಯರಾದ ಶ್ರೀ ಶ್ರೀನಿವಾಸ್ ಪ್ರಭು, ಶ್ರೀ ರಮಾನಾಥ್ ಪಾಟ್ಕರ್, ಶ್ರೀ ದತ್ತಾತ್ರೇಯ ಪಾಟ್ಕರ್, ಶ್ರೀ ದೇವದಾಸ್ ಪಾಟ್ಕರ್, ಶ್ರೀ ರಾಜೇಂದ್ರ ಪ್ರಭು, ಶ್ರೇಯಸ್ ಭಟ್ ರವರುಗಳು ದಿವಂಗತ ಪ್ರಭುಗಳವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ತದನಂತರ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶಾಲಾಭಿಮಾನಿಗಳು, ಹಳೇವಿದ್ಯಾರ್ಥಿಗಳು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದಿವಂಗತ ಪ್ರಭುರವರ ಶಿಷ್ಯರು, ಅಭಿಮಾನಿಗಳು ಹಾಗೂ ಶಾಲಾ ಶಿಕ್ಷಕಿ ಬಂಧುಗಳು ಭಾಗವಹಿಸಿದ್ದರು.
ಶ್ರೀ ಕೆ ಆರ್ ಪಾಟ್ಕರ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.
