ಕಂದನ ಸಹಾಯಕ್ಕಾಗಿ ವೇಷಧರಿಸಿದ ಮಹಾಗಣಪತಿ ಸೇವಾ ಟ್ರಸ್ಟ್ ಸದಸ್ಯರು
Thumbnail
ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಡ್ಯಾರ್ ಪದವಿನ ಸುರೇಶ್ ಹಾಗೂ ಅಂಬಿಕಾ ದಂಪತಿಯ 4 ವರ್ಷದ ಪುಟ್ಟ ಕಂದ ದರ್ಶನ್ ನ ಚಿಕಿತ್ಸೆಗೆ ಸರಿಸುಮಾರು ಹದಿನೈದು ಲಕ್ಷ ರೂಪಾಯಿಯ ಅಗತ್ಯವಿದ್ದು ದಂಪತಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದು. ಸಂತ್ರಸ್ತರ ಅಳಲನ್ನು ಮನಗಂಡು ಮಹಾಗಣಪತಿ ಸೇವಾ ಟ್ರಸ್ಟ್ ನ ಸದಸ್ಯರು ಶಿಬರೂರು ಜಾತ್ರೆಯಲ್ಲಿ ಉರಿ ಬಿಸಿಲಿನ ಬೇಗೆಯ ನಡುವೆಯೂ ಮಹಿಷಾಸುರನ ವೇಷಧರಿಸಿ ದಾನಿಗಳಿಂದ ಸಹಾಯಹಸ್ತವನ್ನು ಚಾಚಿದರು. ಇವರ ಈ ಸೇವಾ ಕಾರ್ಯ ಇತರರಿಗೂ ಮಾದರಿ.
Additional image
22 Dec 2020, 02:43 PM
Category: Kaup
Tags: