ಪಾಂಗಾಳ : ಮೂರು ಹೆಬ್ಬಾವುಗಳ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕರ ತಂಡ
Thumbnail
ಕಾಪು : ಪಾಂಗಾಳದ ಮನೆಯ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ಮೂರು ಹೆಬ್ಬಾವುಗಳನ್ನು ಶಿವಾನಂದ ಪೂಜಾರಿ ಯಾನೆ ಮುನ್ನ‌ ಕಾಪು ನೇತೃತ್ವದ ತಂಡ ಗುರುವಾರ ಸಂಜೆ ಸೆರೆ ಹಿಡಿದು, ರಕ್ಷಿಸಿದೆ. ಪಾಂಗಾಳ ಗುಡ್ಡೆ ನಿವಾಸಿ ಆಲ್ವಿನ್ ಪ್ರಕಾಶ್ ಎಂಬವರ ಮನೆಯ ದನದ ಹಟ್ಟಿಯಲ್ಲಿ ಹೆಬ್ಬಾವು ಇರುವುದನ್ನು ಗಮನಿಸಿದ ಮನೆಯವರು ಈ ಬಗ್ಗೆ ಹಾವು ಹಿಡಿಯುವುದರಲ್ಲಿ ನಿಸ್ಸೀಮರಾಗಿರುವ ಶಿವಾನಂದ್ ಕಾಪು ಅವರಿಗೆ ಮಾಹಿತಿ ನೀಡಿದ್ದರು.‌ ಹೆಬ್ಬಾವು ಇರುವ ಬಗ್ಗೆ ಮಾಹಿತಿ ಪಡೆದ ಶಿವಾನಂದ್ ಯಾನೆ ಮುನ್ನ ಕಾಪು, ಮಾಧವ ಪೂಜಾರಿ, ಸತೀಶ್, ಸಂದೀಪ್, ಉಮೇಶ್, ಪ್ರಕಾಶ್ ಅಲ್ವಿನ್, ಜಾರ್ಜ್‌ ಮತ್ತು ರವಿ ಬಿಂದಾಸ್ ಜೊತೆ ಸೇರಿ ಅಲ್ವಿನ್ ಅವರ ಮನೆಗೆ ಭೇಟಿ ನೀಡಿ ಮೂರೂ ಹೆಬ್ಬಾವುಗಳನ್ನು ರಕ್ಷಿಸಿದ್ದಾರೆ. ಹೆಬ್ಬಾವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿಗಳ ಸುಪರ್ದಿಗೆ ಒಪ್ಪಿಸಲಾಗಿದೆ.
Additional image Additional image Additional image
25 Dec 2020, 01:46 PM
Category: Kaup
Tags: