ಕಾಪು : ಕೋವಿಡ್ ನಿಯಮ ಉಲ್ಲಂಘನೆ, ಅಧಿಕಾರಿಗಳ ಮೌನ
Thumbnail
ಕಾಪು : ಕಾಪು ತಾಲೂಕಿನ ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಇಂದು ಮುಂಜಾನೆಯಿಂದ ಆರಂಭಗೊಂಡಿದ್ದು, ಅನೇಕ ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಮತ್ತು ವಿಜೇತರ ಘೋಷಣೆಯಾಗಿದೆ. ಇನ್ನು ಕೆಲವೇ ಕೆಲವು ಗ್ರಾ. ಪ ಗಳ ಮತ ಎಣಿಕೆ ಮತ್ತು ವಿಜೇತರ ಘೋಷಣೆ ಬಾಕಿ ಇದೆ. ಇಂದು ಬೆಳಿಗ್ಗಿನಿಂದ ಮತ ಎಣಿಕೆಯ ಕೇಂದ್ರದ ವಠಾರದಲ್ಲಿ ಜನರು ಗುಂಪು ಗುಂಪಾಗಿ ಸೇರುತ್ತಿದ್ದು. ಸರಕಾರ ಕೋವಿಡ್ ಗಾಗಿ ಉಲ್ಲೆಖಿಸಿರುವ ಯಾವುದೇ ನಿಯಮಗಳನ್ನು ಜನರು ಪಾಲಿಸುತ್ತಿಲ್ಲ ಮತ್ತು ಯಾರು ಕೂಡಾ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.. ಸರಕಾರದ ಸೂಚನೆಯನ್ನು ನಿರ್ಲಕ್ಷಿಸುವುದು ಕಾನೂನರ್ಹ ಅಪರಾಧವಾಗಿದೆ.. ಇಂತಹ ಸಮಯದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಮೌನವಾಗಿರುವುದು ಬೇಜವಾಬ್ದಾರಿಯನ್ನು ತೋರಿದಂತಿದೆ..
Additional image Additional image
30 Dec 2020, 09:45 PM
Category: Kaup
Tags: