ಬಂಟಕಲ್ : ಝಿಝೋ ಎಜುಕೇಷನ್ ಸೆಂಟರ್ ಉದ್ಘಾಟನೆ
Thumbnail
ಕಾಪು ತಾಲೂಕಿನ ಬಂಟಕಲ್ ಮುಖ್ಯರಸ್ತೆಯ ಮೈತ್ರಿ 3 ಕಾಂಪ್ಲೆಕ್ಸಿನ ಝಿಝೋ ಎಜುಕೇಷನ್ ಸಂಸ್ಥೆಯನ್ನು ಝಿಝೋ ಸಿಸ್ಟರ್ಸ್ ಝಿಯಾ ಮತ್ತು ಝೋ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸೈಂಟ್ ಅಲೋಶಿಯಸ್ ಕಾಲೇಜ್ ಮಂಗಳೂರಿನ ಪ್ರಾಂಶುಪಾಲರಾದ ರೆ. ಡಾ. ಪ್ರವೀಣ್ ಮಾರ್ಟಿಸ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ, ಪಾಂಬೂರು ಹೋಲಿ ಚರ್ಚಿನ ಧರ್ಮಗುರುಗಳಾದ ರೆ. ಫಾ. ಹೆನ್ರಿ ಮಸ್ಕರೇನಸ್ ಉಪಸ್ಥಿತರಿದ್ದರು. ವಿಜಯ್ ಧೀರಜ್ ಸ್ವಾಗತಿಸಿದರು , ರಿಚಿ ವಂದಿಸಿದರು. ವಿದ್ಯಾಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
Additional image Additional image
04 Jan 2021, 07:00 PM
Category: Kaup
Tags: