ಶಂಕರಪುರ ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ಪದಗ್ರಹಣ : ಅಧ್ಯಕ್ಷರಾಗಿ ರಾಯನ್ ಫೆರ್ನಾಂಡಿಸ್
Thumbnail
ಕಾಪು : ಶಂಕರಪುರದ ಸೈಂಟ್‌ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ 2021 - 22ನೇ ಸಾಲಿನ ಪದಗ್ರಹಣವು ಶಂಕರಪುರದ ಸೈಂಟ್ ಜೋನ್ಸ್ ಅಕಾಡೆಮಿ ಹಾಲ್ ನಲ್ಲಿ ಜರಗಿತು. ಸಮಾರಂಭವನ್ನು ಶಂಕರಪುರ ಸೈಂಟ್ ಜೋನ್ಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂದನೀಯ ಗುರು ‌ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಶಾಕ್ ಜಿ. ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಸ್ಥೆಯ ಹಳೆ ವಿದ್ಯಾರ್ಥಿಗಳನ್ನು ಹಾಗೂ ಎಲ್ಲಾ ಪೂರ್ವಧ್ಯಕ್ಷರನ್ನು ಗೌರವಿಸಲಾಯಿತು ಈ ಸಂದರ್ಭದಲ್ಲಿ ನವೀನ್ ಅಮೀನ್ ಶಂಕರಪುರ ಹಳೆ ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆಯನ್ನು ತಿಳಿಸಿದರು. ಶಂಕರಪುರದ ಸೈಂಟ್ ಜೋನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಿಯಾ ಡೆಸಾ, ಶಂಕರಪುರ ಸೈಂಟ್ ಜೋನ್ಸ್ ಪ್ರೌಢಶಾಲೆಯ ‌ಮುಖ್ಯ ಶಿಕ್ಷಕರಾದ ಅಶ್ವಿನ್ ರೋಡ್ರಿಗಸ್, ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿಯ ಮುಖ್ಯ ಶಿಕ್ಷಕಿಯಾದ ಸಿ. ಜುಲಿಯಾನ ಲಸ್ರಾದೊ, ಶಂಕರಪುರ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ‌ ಶ್ರೀಮತಿ ಐರಿನ್ ಡಿಸೋಜಾ, 2020-21 ನೇ ಸಾಲಿನ ರಾಯನ್ ಫೆರ್ನಾಂಡಿಸ್, ಕಾರ್ಯದರ್ಶಿ ವೀಣಾ ಡಿಸೋಜಾ, 2021-22ನೇ ಸಾಲಿನ ನೂತನ ಅಧ್ಯಕ್ಷರಾದ ರಾಯನ್ ಫೆರ್ನಾಂಡಿಸ್ ,ಕಾರ್ಯದರ್ಶಿ ಪ್ರಥಮ್ ಡಿಸೋಜಾ, ಖಜಾಂಚಿ ಶ್ರೀಮತಿ ಸುನೀತ ಲೀನಾ ಡಿಸೋಜಾ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
Additional image Additional image Additional image
09 Jan 2021, 11:36 PM
Category: Kaup
Tags: