ನಿರುದ್ಯೋಗಿಗಳಿಗೆ ಆಶಾಕಿರಣ ರುಡ್ಸೆಟ್ ಸಂಸ್ಥೆ : ಎಮ್ ಮಹೇಶ್ ಕುಮಾರ್ ಮಲ್ಪೆ
ನಿರುದ್ಯೋಗಿಗಳಿಗೆ ಆಶಾಕಿರಣ ರುಡ್ಸೆಟ್ ಸಂಸ್ಥೆಯಾಗಿದೆ ಎಂದು ಈ ಸಂಸ್ಥೆ ಯಲ್ಲಿ 30 ವರ್ಷ ಗಳ ಹಿಂದೆ ತರಬೇತಿ ಪಡೆದ ಯಶಸ್ವೀ ಉದ್ಯಮಿ ಎಮ್ ಮಹೇಶ್ ಕುಮಾರ್ ಹೇಳಿದರು.
ಅವರು ರುಡ್ಸೆಟ್ ಸಂಸ್ಥೆ ಬ್ರಹ್ಮಾವರ 30 ದಿನ ಗಳ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದರು.
ಅವರು ಪ್ರಮಾಣ ಪತ್ರ ವನ್ನು ವಿತರಿಸಿ ಶಿಬಿರಾರ್ಥಿ ಗಳಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಪಾಪ ನಾಯಕ್ ರವರು ಅಧ್ಯಕ್ಷತೆ ವಹಿಸಿದ್ದರು.
31 ಜನ ತರಬೇತಿ ಪಡೆದು ತಮ್ಮ ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು. ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್ ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ಸಂತೋಷ ಶೆಟ್ಟಿ ವಂದಿಸಿದರು.
