ಅಮ್ಮ ಇರೆನ ಜೋಕುಲೆಂಕುಲು ಭಜನೆ ಮಲ್ಪುವ ತುಳು ಭಕ್ತಿ ಗೀತೆ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ
Thumbnail
ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆಗೆ, ಭಾವತುಂಬಿ ಸಮರ್ಪಣಾ ಭಾವದಿಂದ ಹಾಡುವ ಹಾಡುಗಾರ ವಿಜಯ್ ಶೆಟ್ಟಿ ಮೂಡುಬೆಳ್ಳೆ. ಇವರ ಮಧುರ ಕಂಠಕ್ಕೆ ಮಾರು ಹೋಗದವರೇ ಇಲ್ಲ. ವಿಜಯರ ಹಾಡಿನಲ್ಲಿ ಕೇವಲ ಹಾಡು ಮಾತ್ರವಿರುವುದಿಲ್ಲ. ಅಲ್ಲಿ ಭಾವ ತುಂಬಿ ಗಾಯನದಲ್ಲಿ ಲೀನವಾಗುವ ತನ್ಮಯತೆ ಇರುತ್ತದೆ. ಶಾರದೆಯ ಗುಡಿಯಲ್ಲಿ ಸರ್ವವನ್ನೂ ಅರ್ಪಿಸಿಕೊಂಡ ಆತ್ಮ ಸಮರ್ಪಣೆಯ ಸಾಕ್ಷಾತ್ಕಾರವಿರುತ್ತದೆ. ಜಗನ್ಮಾತೆಯ ಮಹಿಮೆಯನ್ನು ಪಾಡುವ ಸುಯೋಗ ಮತ್ತೊಮ್ಮೆ ಈ ಸಂಗೀತ ಗಾರನಿಗೆ ಒಲಿದು ಬಂದಿದೆ. ಮಕರ ಸಂಕ್ರಾಂತಿಯ ಶುಭದಿನದಂದು "ಅಮ್ಮ ಇರೆನ ಜೋಕುಲೆಂಕುಲು" ಭಕ್ತಿ ಗಾನಾಮೃತವನ್ನು ತನ್ನದೇ ಸ್ವಂತ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಎಲ್ಲರೂ ವೀಕ್ಷಿಸಿ, ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಬೇಕು ಎಂದು ವಿನಂತಿಸಿದ್ದಾರೆ.
16 Jan 2021, 05:22 PM
Category: Kaup
Tags: