ಅದಮಾರು ರೈಲ್ವೆ ಹಳಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ
Thumbnail
ಪಡುಬಿದ್ರಿ ಠಾಣಾ ವ್ಯಾಪ್ತಿಯ ಅದಮಾರು ಕುಂಜೂರು ರೈಲ್ವೆ ಹಳಿಯ ಬಳಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ. ಬಾಗಲಕೋಟೆ ಮೂಲದ ಹುಲ್ಲಪ್ಪ ಹೆಸರಿನ ಈ ವ್ಯಕ್ತಿ ವಿವಾಹಿತನಾಗಿದ್ದು 2 ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣವೇನೆಂದು ಇದುವರೆಗೂ ತಿಳಿದು ಬಂದಿಲ್ಲ. ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಮತ್ತು ನಾಗರಾಜರ ಸಹಾಯದಿಂದ ಆಂಬುಲೆನ್ಸ್‌ಮೂಲಕ ಶವವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೋಲಿಸರು ಭೇಟಿ ನೀಡಿದ್ದಾರೆ.
Additional image Additional image
17 Jan 2021, 12:24 PM
Category: Kaup
Tags: