ಇಂದಿಗೆ 200 ವರ್ಷ ಪೂರೈಸಿದ ಸಂಭ್ರಮದಲ್ಲಿ ಶ್ರೀವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಅವರಾಲುಮಟ್ಟು
Thumbnail
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಲಿಮಾರು ಪಂಚಾಯಿತಿ ವ್ಯಾಪ್ತಿಯ ಹಲವಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಶಾಲೆ ಅನುದಾನಿತ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಇಂದು‌ 200 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. 1821 ಜನವರಿ 27ರಂದು ಆರಂಭವಾದ ಈ ಶಾಲೆಯು ಗ್ರಾಮೀಣ ಭಾಗದ ಮಕ್ಕಳಿಗೆ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಶಿಕ್ಷಣದ ಕನಸನ್ನು ನನಸು ಮಾಡಿತ್ತು. ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ವೃತ್ತಿ ನಿರತರಾಗಿದ್ದಾರೆ. ಆಂಗ್ಲ ಮಾಧ್ಯಮದ ಭರಾಟೆಯಲ್ಲಿ ಅಪರೂಪವೆನ್ನುವಂತೆ ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದ ಶಾಲೆಯೊಂದು 200 ವರ್ಷ ಪೂರೈಸಿರುವುದು ಅವರಾಲುಮಟ್ಟು ಗ್ರಾಮದ ಜನತೆಗೆ ಹೆಮ್ಮೆಯೊಂದಿಗೆ ಖುಷಿಯನ್ನು ಉಂಟುಮಾಡಿದೆ.
26 Jan 2021, 06:11 PM
Category: Kaup
Tags: