ಹೇರೂರು : ಶ್ರೀರಾಮ ಮಂದಿರದ ಅಭಿಯಾನದ ಪ್ರಯುಕ್ತ ಭಾರತ ಮಾತಾಪೂಜಾ ಕಾರ್ಯಕ್ರಮ
Thumbnail
ಶ್ರೀರಾಮ ಮಂದಿರದ ಅಭಿಯಾನದ ಪ್ರಯುಕ್ತ ಇಂದು ಹೇರೂರು ದಿನೇಶ್ ದೇವಾಡಿಗ ರವರ ಮನೆಯಲ್ಲಿ ಭಾರತ ಮಾತಾಪೂಜಾ ಕಾರ್ಯಕ್ರಮ ನಡೆಯಿತು. ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಹೇರೂರು ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಜಯ ಶೆಟ್ಟಿ ಹೇರೂರು, ಶಂಕರ ದೇವಾಡಿಗ, ಶ್ರೀ ನಿತ್ಯಾನಂದ ಆಚಾರ್ಯ, ವರುಣ್ ಆಚಾರ್ಯ, ನಳಿನಾಕ್ಷಿ ಆಚಾರ್ಯ, ಶಶಿಕಲ ದೇವಾಡಿಗ, ಶೈಲಜಾ ಪೂಜಾರಿ, ಮಾಲತಿ ಆಚಾರ್ಯ, ಸುಮಿತ್ರ ದೇವಾಡಿಗ, ಸುಂದರಿರಾವ್, ಕಮಲ ದೇವಾಡಿಗ, ಉದಯ ದೇವಾಡಿಗ, ಭಾರತಿ ಆಚಾರ್ಯ, ಪವಿತ್ರ ರಾವ್, ಶಶಿಕಲಾ ಆಚಾರ್ಯ, ಶಾಂತ ಮೂಲ್ಯ, ಜಯ ಸೇರಿಗಾರ್, ಶ್ರೀನಿವಾಸ ದೇವಾಡಿಗ, ವಿನೋದ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಸಾಮೂಹಿಕವಾಗಿ ಶ್ರೀ ಹನುಮಾನ್ ಚಾಲೀಸ್ ಪಠಣ ಮಾಡಲಾಯಿತು. ಶ್ರೀ ಭಾರತಮಾತೆಗೆ ಪುಷ್ಪಾರ್ಚನ ಮಾಡಲಾಯಿತು. ಶ್ರೀ ದಿನೇಶ್ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿ, ಪ್ರೀತಿ ಆಚಾರ್ಯರವರು ವಂದಿಸಿದರು.
Additional image Additional image
26 Jan 2021, 09:54 PM
Category: Kaup
Tags: