ಮಟ್ಟಾರು : ಶ್ರೀರಾಮ ನಾಮ ಜಪದೊಂದಿಗೆ ಶ್ರೀರಾಮೋತ್ಸವ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ವಿಶ್ವ ಹಿಂದು ಪರಿಷದ್ ಬಜರಂಗದಳ ಮಾತೃಶಕ್ತಿ ಮಟ್ಟಾರು ಘಟಕದ ನೇತೃತ್ವದಲ್ಲಿ ಶ್ರೀರಾಮೋತ್ಸವ ಜರಗಿತು. ಸಾಮೂಹಿಕವಾಗಿ ದೀಪ ಪ್ರಜ್ವಲನೆಯೊಂದಿಗೆ ಶ್ರೀರಾಮ ನಾಮ ಜಪ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಕರಸೇವಕರಾದ ಪಾಂಡುರಂಗ ಶ್ಯಾನಭಾಗ್ ಮಾರ್ಗದರ್ಶನ ಮಾಡಿದರು. ಕರಾವಳಿ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ,ಅಯೋಧ್ಯೆ ಕರಸೇವಕರಾದ ರಮೇಶ ಪ್ರಭು, ದಿನೇಶ ಪಾಟ್ಕರ್, ವಿಶ್ವ ಹಿಂದು ಪರಿಷದ್ ಮಟ್ಟಾರು ಘಟಕದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಧರ್ಮಾಚಾರ್ಯ ಪ್ರಮುಖ್ ವೇದಮೂರ್ತಿ ಪ್ರಸನ್ನ ಭಟ್ ಶ್ರೀರಾಮ ನಾಮ ಮಂತ್ರ ಭೋಧಿಸಿದರು.ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.
ಸುಮಾರು 200 ರಷ್ಟು ಜನರು ಸಾಮೂಹಿಕವಾಗಿ ಶ್ರೀರಾಮ ನಾಮ ಜಪ ಮಾಡಿದರು.
