ಕುತ್ಯಾರು : ಭಾರತ ಮಾತಾ ಪೂಜನಾ ಕಾರ್ಯಕ್ರಮ
ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾರತಮಾತಾ ಪೂಜನಾ ಕಾರ್ಯಕ್ರಮವು ಪಡು ಕುತ್ಯಾರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಜರಗಿತು.
ಹಿಂದುಗಳು ಬಿಂದು ಬಿಂದುವಾಗಿ ಸಂಘಟಿತರಾಗಿ ಆದರ್ಶಪುರುಷ ಶ್ರೀರಾಮನ ತತ್ವ, ಪರಸ್ಪರ ಪ್ರೇಮ, ಸ್ನೇಹ, ಸದ್ಭಾವ, ಕರುಣೆ, ಮಮತೆ, ಬಂಧುತ್ವ, ಆರೋಗ್ಯಗಳಿಂದ ಕೂಡಿದ ಸಂತೃಪ್ತ ಜೀವನ ನಡೆಸುವಂತಾಗಲಿ. ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಾತೃ ಮಂಡಳಿಯ ಪ್ರಮುಖ್ ಶ್ರೀಮತಿ ರಾಜಲಕ್ಷ್ಮಿ ಸತೀಶ್ ಕರೆ ನೀಡಿದರು.
ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ್ ಬಿ. ಶೆಟ್ಟಿ, ಸಂಪತ್ ಕುಮಾರ್, ಭಾರತಿ ರಾಘವೇಂದ್ರ, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಆಚಾರ್ಯ ಹಾಗೂ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರಾದ ಪವನ್ ಶೆಟ್ಟಿ ಕೇಂಜ, ಸುಂದರಿ ಕುಲಾಲ್, ಪ್ರವೀಣ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಗಂಗಾಧರ ಆಚಾರ್ಯ ಸ್ವಾಗತಿಸಿ, ಶಶಿರಾಜ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸುಶಾಂತ್ ಶೆಟ್ಟಿ ವಂದಿಸಿದರು.
