ಶಂಕರಪುರ : ರಾಷ್ಟ್ರಿಯ ರಸ್ತೆ ಸುರಕ್ಷತಾ ಸಪ್ತಾಹ -2021 ಮಾಹಿತಿ ಕಾರ್ಯಕ್ರಮ ಮತ್ತು ಜಾಥಾ
ರೋಟರಿ ಶಂಕರಪುರ, ಶಿರ್ವ ಪೊಲೀಸ್ ಠಾಣೆ, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ, ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ ಮತ್ತು ಶ್ರೀ ದುರ್ಗಾ ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ ಇವರ ಸಹಯೋಗದಲ್ಲಿ ರಾಷ್ಟ್ರಿಯ ರಸ್ತೆ ಸುರಕ್ಷತಾ ಸಪ್ತಾಹ -2021ರ ಮಾಹಿತಿ ಕಾರ್ಯಕ್ರಮ ಮತ್ತು ಜಾಥಾ ಕಾರ್ಯಕ್ರಮವು ಶಂಕರಪುರ ರೋಟರಿ ಭವನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಶಿರ್ವ ಠಾಣಾ ಅಧಿಕಾರಿಯಾದ ಶ್ರೀ ಶೈಲ ಮುರಗೋಡ ಇವರು ಮಾಡಿದರು.
ರಸ್ತೆ ಸುರಕ್ಷತಾ ಜಾಥಾ ಚಾಲನೆಯನ್ನು ವಲಯ 5.ರ ಅಸಿಸ್ಟೆಂಟ್ ಗವರ್ನರ್ ಆದ ರೋ ನವೀನ್ ಅಮೀನ್ ಮಾಡಿದರು.ಜಾಥಾವನ್ನು ಶಂಕರಪುರ ರೋಟರಿಯಿಂದ ಸೈoಟ್ ಜೋನ್ಸ್ ಚರ್ಚ್ ನವರೆಗೆ ಜಾಥಾವನ್ನು ನಡೆಸಲಾಯಿತು, ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಅಧ್ಯಕ್ಷರು ಆದ ಕರುಣಾಕರ್, ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ ಅಧ್ಯಕ್ಷರು ಆದ ಶ್ರೀವತ್ಸ ಮತ್ತು ಶ್ರೀ ದುರ್ಗಾ ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರದ ಅಧ್ಯಕ್ಷರು ಆದ ರಮೇಶ್ ನಾಯಕ್ ಮತ್ತು ಕಾರ್ಯಕ್ರಮದ ಸಂಯೋಜಕರು ಆದ ರೋ ಡೆನ್ಜಿಲ್ ಕ್ಯಾಸ್ತಲಿನೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಾಥಾ ಕಾರ್ಯಕ್ರಮದಲ್ಲಿ ಸೈಂಟ್ ಜೋನ್ಸ್ ಪಿ ಯು ಕಾಲೇಜು ಮತ್ತು ಕನ್ನಡ ಮೀಡಿಯಂನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮತ್ತು ರೋಟರಿ ಶಂಕರಪುರದ ಸದಸ್ಯರು, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು, ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು, ಶ್ರೀ ದುರ್ಗಾ ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಶಂಕರಪುರದ ಅಧ್ಯಕ್ಷರು ಆದ ರೋ ವಿಕ್ಟರ್ ಮಾರ್ಟಿಸ್ ವಹಿಸಿದ್ದರು. ಮುಖ್ಯ ಅತಿಥಿಗಳನ್ನು ರೋ. ಸಂದೀಪ್ ಬಂಗೇರ ಇವರು ವೇದಿಕೆಗೆ ಆಹ್ವಾನಿಸಿ, ರೋಟರಿ ಪ್ರಾರ್ಥನೆಯನ್ನು ರೋ. ಮಾಲಿನಿ ಶೆಟ್ಟಿ ಮಾಡಿದರು. ರೋಟರಿ ಶಂಕರಪುರ ದ ಕಾರ್ಯದರ್ಶಿಯಾದ ರೋ ಜೆರಾಮ್ ರೋಡ್ರಿಗೆಸ್ ಇವರು ಧನ್ಯವಾದಗೈದರು.
