ಕುತ್ಯಾರು : ಭಾರತ ಮಾತಾ ಪೂಜನಾ ಕಾರ್ಯಕ್ರಮ
Thumbnail
ಅಯೋಧ್ಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾರತ ಮಾತಾ ಪೂಜನಾ ಕಾರ್ಯಕ್ರಮ ಕೇಂಜ ತಂತ್ರಿ ‌ನಿವಾಸದಲ್ಲಿ ಜರಗಿತು. ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಭವ್ಯ ಮಂದಿರದ ಜತೆ ಜತೆಯಲ್ಲೇ ದೇಶವಾಸಿಗಳ ಹೃದಯ ಮಂದಿರಗಳಲ್ಲಿ ಶ್ರೀರಾಮನು ತೋರಿದ ಜೀವನ ಮೌಲ್ಯಗಳು ನೆಲೆಗೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಎಲ್ಲೂರು ಸೀಮೆಯ ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳು ಹೇಳಿದರು. ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ್ಯ ಶಾರೀರಿಕ್ ಸತೀಶ್ ಕುತ್ಯಾರು, ಶಿರ್ವ ಸಿಎ ಬ್ಯಾಂಕ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಭಂಡಾರಿ, ಆರೆಸೆಸ್ಸ್ ಮಹಿಳಾ ಪ್ರಮುಖ್ ರಾಜಲಕ್ಷ್ಮಿ ಸತೀಶ್, ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ್ ಬಿ. ಶೆಟ್ಟಿ, ಸಂಪತ್ ಕುಮಾರ್, ಭಾರತಿ ರಾಘವೇಂದ್ರ, ಗ್ರಾಮದ ಪ್ರಮುಖರಾದ ಭಾರ್ಗವ ತಂತ್ರಿ, ಹರಿಕೃಷ್ಣ ಭಟ್, ಸುಧಾಕರ ಪೂಜಾರಿ ಕೇಂಜ, ಸುಭಾಷ್ ಅಂಚನ್, ಪವನ್ ಶೆಟ್ಟಿ ಕೇಂಜ, ಸುಶಾಂತ್ ಶೆಟ್ಟಿ, ದಿನೇಶ್ ಆಚರ್ಯ, ಗೀತಾ ಬಗ್ಗ ತೋಟ ಮೊದಲಾದವರು ಉಪಸ್ಥಿತರಿದ್ದರು.
Additional image Additional image
31 Jan 2021, 04:19 PM
Category: Kaup
Tags: