ಸಂತ ಮೇರಿ ಕಾಲೇಜು ಶಿರ್ವ : ಭವಿಷ್ಯದ ಜೀವನ ಮತ್ತು ಉದ್ಯೋಗ ಕೌಶಲ್ಯಗಳು ಕಾರ್ಯಕ್ರಮ
Thumbnail
ಶಿರ್ವ : ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜೊತೆಗೆ ಅಗತ್ಯವಾಗಿ ಬೇಕಾಗುವ ಸಲಹೆ ಮತ್ತು ಸೂಚನೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸುತ್ತಾ ಪದವಿ ವ್ಯಾಸಂಗ ಮಾಡುವ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜತೆಗೆ ಭಾವನಾತ್ಮಕ ವಿಚಾರಗಳೊಂದಿಗೆ ಜವಾಬ್ದಾರಿಯುತ ಮೌಲ್ಯ ಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದು ಮುಖ್ಯಅಥಿತಿಯಾಗಿ ಆಗಮಿಸಿದ ಮೈಟ್‍ ಕಾಲೇಜಿನ ಪ್ರಾಧ್ಯಾಪಕರಾದ ಶ್ರಿ ಪ್ರದಿಪ್ ಬಿ.ಆರ್ ರವರು ಕಿವಿಮಾತು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮೈಟ್ ಕಾಲೇಜಿನ ಪ್ರಾದ್ಯಾಪಕರಾದ ಶ್ರಿ ವೆರಿನಾ ಡಿಸೋಜಾ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪದವಿ ಶಿಕ್ಷಣದ ನಂತರ ಉನ್ನತ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳುವುದು ಇಂದು ಅಗತ್ಯವಾಗಿದೆ.ಇದರ ಪ್ರಯುಕ್ತ ಪ್ರಾತ್ಯಕ್ಷಿಕೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಎಲ್ಲಾ ಸುಲಭ ಮಾರ್ಗವನ್ನು ತಿಳಿಸಿ ತರಬೇತಿ ನೆರವೇರಿಸಿಕೊಟ್ಟರು. ಮೂಡಬಿದ್ರೆ-ಮಿಜಾರಿನ ಮೈಟ್‍ಕಾಲೇಜು ಹಾಗೂ ಶಿರ್ವ ಸಂತ ಮೇರಿಕಾಲೇಜು ಪರಸ್ಪರ ಒಡಂಬಡಿಕೆಯ ಅನುಸಾರ ಕಾಲೇಜಿನ ದೃಶ್ಯಶ್ರಾವ್ಯ ಕೊಠಡಿಯಲ್ಲಿ ಭವಿಷ್ಯದ ಜೀವನ ಮತ್ತು ಉದ್ಯೋಗ ಕೌಶಲ್ಯಗಳು ಕಾರ್ಯಾಕ್ರಮವನ್ನುಏರ್ಪಡಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನದ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಂಡಾಗ ಮುಂದೆ ಉದ್ಯೋಗವನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರಿ ವಿಠಲ್ ನಾಯಕ್‍ರವರು ಕಿವಿ ಮಾತು ಹೇಳಿದರು. ಉದ್ಯೋಗ ಕ್ಷೇತ್ರದಲ್ಲಾಗುತ್ತಿರುವ ವಿವಿಧ ಹೊಸ ವೃತ್ತಿಪರ ಕೌಶಲಾಭಿವೃದ್ಧಿಯ ಕಲಿಕೆಯ ಅವಶ್ಯಕತೆಯನ್ನು ವಿದ್ಯಾರ್ಥಿದೆಸೆಯಲ್ಲೇ ರೂಢಿಸಿಕೊಳುವ ಮೂಲಕ ಹೊಸ ಸವಾಲುಗಳನ್ನು ದಿಟ್ಟವಾಗಿ ನಿಭಾಯಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ ಎಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರಿ ಕೆ.ಪ್ರವೀಣ್ ಕುಮಾರ್ ರವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಸುಷ್ಮಾ, ಶ್ರೀಮತಿ ದಿವ್ಯಶ್ರಿ, ಶ್ರೀ ಪ್ರಕಾಶ್ ಹಾಗೂ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.ಕು.ದಾಕ್ಷಾಯನಿ ವಂದಿಸಿದರು, ಕು. ಕೃಪಾ ಬಿ ಆಚಾರ್ಯ ಪ್ರಾರ್ಥಿಸಿ, ಕು.ಸಿಯಾನ ಭಾನು ಸ್ವಾಗತಿಸಿದರು. ಕು. ಶ್ರುತಿ ಸಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
Additional image Additional image Additional image
01 Feb 2021, 04:27 PM
Category: Kaup
Tags: