ತುಳು ಹಾಸ್ಯಮಯ ನಾಟಕ ಪರಕೆ ಪೂವಕ್ಕೆಗೆ ಅದ್ದೂರಿ ಮುಹೂರ್ತ
Thumbnail
ಶಿವಾನಂದ ಶೆಟ್ಟಿ ಮಂಗಲ್ಪಾಡಿ ನಿರ್ಮಾಣದ ಅಮ್ಮ ಕಲಾವಿದರು ಕುಡ್ಲ ಅಭಿನಯದ ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ರಚನೆಯ, ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ತುಳು ಹಾಸ್ಯಮಯ ನಾಟಕ ಪರಕೆ ಪೂವಕ್ಕೆಯ ಮುಹೂರ್ತ ಕಾರ್ಯಕ್ರಮ ಇಂದು ಬೆಳಿಗ್ಗೆ 10.30 ಕ್ಕೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪಳ ದಲ್ಲಿ ಅದ್ದೂರಿಯಾಗಿ ನೆರವೇರಿತು. ತದನಂತರ ನಡೆದ ಸಭಾಕಾರ್ಯಕ್ರಮದಲ್ಲಿ ತುಳುರಂಗಭೂಮಿ ಹಾಗು ಚಲನಚಿತ್ರ ನಿರ್ದೇಶಕರು ಆದ ವಿಜಯ್ ಕುಮಾರ್ ಕೊಡಿಯಾಲಬೈಲ್, ರಂಗಭೂಮಿ ಕಲಾವಿದರಾದ ಅರುಣ್ ಪೇಜಾವರ, ರಾಜೇಶ್ ಕಣ್ಣೂರ್, ಸುದ್ದಿಬಿಡುಗಡೆ ಚಾನೆಲ್ ನ ಹಮೀದ್ ಪುತ್ತೂರು, ಯಕ್ಷಗಾನ ನಾಟ್ಯಗುರು ರಾಮ ಸಾಲಿಯಾನ್ ಮಂಗಲ್ಪಾಡಿ, ಉದ್ಯಮಿ ಕಲಾ ಪೋಷಕರಾದ ವಾಸು ಬಾಯಾರ್, ಶ್ರೀಧರ ಶೆಟ್ಟಿ ಮುಟ್ಟಂ ಹಾಗು ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿದರು. ಪ್ರಮುಖ ಕೇಂದ್ರಬಿಂದು ಸುಂದರ್ ರೈ ಮಂದಾರ ಮಾತನಾಡಿ ತಮ್ಮ ರಂಗ ಪಯಣ ಅಮ್ಮ ಕಲಾವಿದರು ಕುಡ್ಲ ತಂಡದಲ್ಲಿ ಮುಂದುವರಿಯಲಿದೆ, ಪ್ರಬುದ್ಧ ರಂಗಭೂಮಿ ಕಲಾವಿದರು ತಮ್ಮ ಜೊತೆ ಕೈಜೋಡಿಸಲಿದ್ದಾರೆ. ಉತ್ತಮ ಗುಣಮಟ್ಟದ ನಾಟಕವನ್ನು ಈ ತಂಡ ರಂಗಭೂಮಿಗೆ ನೀಡಲಿದೆ ಎಂದು ನುಡಿದರು. ನೆರೆದ ಎಲ್ಲ ಗಣ್ಯ ಅತಿಥಿಗಳು ಹೊಸ ನಾಟಕ ಪರಕೆ ಪೂವಕ್ಕೆ ಭರ್ಜರಿ ಯಶಸ್ಸು ಕಾಣಲೆಂದು ಹಾರೈಸಿದರು. ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
Additional image Additional image
06 Feb 2021, 11:08 PM
Category: Kaup
Tags: