ಅಭಿವೃದ್ಧಿಗಾಗಿ ಕಾಯುತ್ತಿರುವ ಟ್ಯಾಪ್ ಮೀ ಹಿರೇಬೆಟ್ಟು ಸಂಪಕ೯ ರಸ್ತೆ
Thumbnail
ಕಾಪು ವಿಧಾನ ಸಭಾ 80 ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಯ ಪ್ರಮುಖ ರಸ್ತೆ ಟ್ಯಾಪ್ಮೀ - ಹಿರೇಬೆಟ್ಟು ಸಂಪಕಿ ೯ಸುವ ಈ ರಸ್ತೆಯು ಸಂಪೂಣ೯ ನಾ ದುರಸ್ತಿಯಲ್ಲಿದೆ.ಕಳೆದ ಒಂದು ವಷ೯ದಿಂದ ಈ ರಸ್ತೆಯು ಸಂಪೂಣ೯ ಹಾಳಾಗಿದ್ದು ಡಾಮರ್ ರಸ್ತೆ ಇದೀಗ ಮಣ್ಣಿನ ರಸ್ತೆಯಾಗಿ ಪರಿವತ೯ನೆಯಾಗಿದೆ. ವಿಶ್ವವಿಖ್ಯಾತ ವಿದ್ಯಾಸಂಸ್ಥೆ ಅದೇ ರೀತಿ ಸಾಲು ಮರದ ತಿಮ್ಮಕ್ಕ ಉದ್ಯಾನವನ ಸಂಪಕಿ೯ಸುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಮೌನವಹಿಸಿರುವುದು ಬೇಸರದ ವಿಚಾರ. ರಸ್ತೆಯಲ್ಲಿ ವಾಹನಗಳು ಬಿಡಿ ನಡೆದಾಡಲು ತೊಂದರೆಯಾಗಿದೆ. ಧೂಳಿನಿಂದ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಈ ರಸ್ತೆಯನ್ನು ಅವಲಂಬಿಸಿರುವವರು ಸಾವಿರಾರು ಮಂದಿ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿಮಾ೯ಣವಾಗಿದೆ. ಆದಷ್ಟು ಬೇಗ ಸಂಬಂಧಿಸಿದ ಜನಪ್ರತಿನಿಧಿ ಅಧಿಕಾರಿಗಳು ರಸ್ತೆಯ ದುರಸ್ತಿಯ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರ ಪರವಾಗಿ ಸಾಮಾಜಿಕ ಚಿಂತಕ ರಾಘವೇಂದ್ರ ಪ್ರಭು, ಕವಾ೯ಲು ತಿಳಿಸಿದ್ದಾರೆ.
09 Feb 2021, 02:49 PM
Category: Kaup
Tags: