ಮುದರಂಗಡಿ : ಬಿಲ್ಲವ ಸಂಘದ 8ನೇ ವರ್ಷದ ವರ್ಧಂತ್ಯುತ್ಸವ , ಪ್ರಭಾವಳಿ ಸಮರ್ಪಣೆ
Thumbnail
ಕಾಪು ತಾಲೂಕಿನ ಮುದರಂಗಡಿ ಬಿಲ್ಲವ ಸಂಘದ 8ನೇ ವರ್ಷದ ವರ್ಧಂತ್ಯುತ್ಸವ , ಪ್ರಭಾವಳಿ ಸಮರ್ಪಣೆಯು ಫೆಬ್ರವರಿ 20, ಶನಿವಾರದಂದು ನಡೆಯಲಿದೆ. ಬೆಳಿಗ್ಗೆ 9:30ಕ್ಕೆ ಪ್ರಭಾವಳಿಯನ್ನು ಮುದರಂಗಡಿ ಅಶ್ವತ್ಥ ಕಟ್ಟೆಯಿಂದ ಶೋಭಾಯಾತ್ರೆಯ ಮೂಲಕ ನಾರಾಯಣಗುರುಗಳ ಮಂದಿರಕ್ಕೆ ತರಲಾಗುವುದು. ಬೆಳಿಗ್ಗೆ 11 ರಿಂದ ಸಭಾ ಕಾರ್ಯಕ್ರಮ, 12:30ಕ್ಕೆ ಮಹಾಪೂಜೆ ಹಾಗೂ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
09 Feb 2021, 05:17 PM
Category: Kaup
Tags: