ಜೀರ್ಣೋದ್ಧಾರಗೊಳ್ಳುತ್ತಿರುವ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರದ ಗೋಡೆಯಲ್ಲಿ ಶಿಲ್ಪಿಗಳಿಗೆ ಕಂಡ ನಗುಮುಖದ ಬಾಬಾ
Thumbnail
ಜೀರ್ಣೋದ್ಧಾರಗೊಳ್ಳುತ್ತಿರುವ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ನೂತನ ಸಾಯಿಬಾಬಾ ಮೂರ್ತಿಯನ್ನು ಕೆತ್ತುತಿರುವ ರಾಜಸ್ಥಾನದ ಜೈಪುರದ ಶಿಲ್ಪಕಲಾ ಕೇಂದ್ರಕ್ಕೆ ಇಂದು ಭೇಟಿ ನೀಡಿದ್ದರು. ಜೈಪುರದಲ್ಲಿ ಸಾಯಿ ಮೂರ್ತಿ ಕೆತ್ತನೆಯ ಶಿಲ್ಪ ಕೇಂದ್ರಕ್ಕೆ ಭೇಟಿ ನೀಡಿದಾಗ ಕಲಾವಿದರು ಬಾಬಾ ಪ್ರತಿಷ್ಠಾಪನಾ ಸ್ಥಳದ ಚಿತ್ರ ಕೇಳಿದಾಗ ಗುರುಗಳು ಮಂದಿರದ ಸಹಾಯಕರಿಗೆ ಕರೆ ಮಾಡಿ ಪೋಟೋ ಕ್ಲಿಕ್ಕಿಸಿ ಕಳುಹಿಸಲು ತಿಳಿಸಿದರು. ಪೋಟೋವನ್ನು ಗಮನಿಸಿದ ಕಲಾವಿದರು ಹೇಳಿದ್ದು ಹರ್ಷದ ಮಾತು "ಬಾಬಾ ತೋ ಮಂದಿರ್'ಮೇ ಹೀ ಹೇ" ("ಬಾಬಾ ಮಂದಿರದಲ್ಲಿಯೇ ಇದ್ದಾರೆ") ಮಂದಿರದ ಗೋಡೆಯಲ್ಲಿ ನಗುಮುಖದ ಬಾಬಾ ಕಾಣಿಸುತ್ತಿದ್ದಾರೆ ನೋಡಿ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
Additional image Additional image
13 Feb 2021, 11:47 PM
Category: Kaup
Tags: