ಅನೈತಿಕ ತಾಣವಾಗಿ ಇತಿಹಾಸ ಪ್ರಸಿದ್ಧ ಧನಸ್ಸು ತೀರ್ಥ, ಭರವಸೆ ಈಡೇರಿಸದ ಪೊಲೀಸ್ ಇಲಾಖೆ, ಮೌನವಹಿಸಿದ ಪಂಚಾಯತ್, ಸ್ಥಳೀಯ ಯುವಕರಿಂದ ಸ್ವಚ್ಛತಾ ಕಾರ್ಯ
Thumbnail
ಗುರು ಪರಶುರಾಮ ರಿಂದ ನಿರ್ಮಿತವಾಗಿದೆ ಎಂಬ ನಂಬಿಕೆ ಇರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಧನಸ್ಸು ತೀರ್ಥವು ಶ್ರೀ ಕ್ಷೇತ್ರ ಕುಂಜಾರುಗಿರಿ ಸಂಬಂಧಿಸಿದ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ, ಮಜೂರು ಗ್ರಾಮಗಳ ಗಡಿಭಾಗದಲ್ಲಿದೆ. ಅನೈತಿಕ ಚಟುವಟಿಕೆಗಳ ತಾಣವಾದ ಸ್ಥಳ : ಇಂತಹ ಪೂಜನೀಯ ಧಾರ್ಮಿಕ ಧನಸ್ಸು ತೀರ್ಥವು ಇದೀಗ ಪುಂಡು-ಪೋಕರಿಗಳ ಕಾಲಕಳೆಯುವ ಸ್ಥಳವಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮದ್ಯ ಪ್ರಿಯರ ಮನೋರಂಜನಾ ಸ್ಥಳವಾಗಿ ಪರಿಣಮಿಸಿರುವುದು ದುರಂತ. ಈ ಬಗ್ಗೆ ಇಂತವರಿಗೆ ಮನವರಿಕೆ ಮಾಡಿದರೆ ವಾಗ್ವಾದ, ಘರ್ಷಣೆಗಳು ಸಂಭವಿಸಿದ್ದೂ ಇದೆ ಎನ್ನುತ್ತಾರೆ ಸ್ಥಳೀಯರು. ಸಂಬಂಧಪಟ್ಟ ಇಲಾಖೆಗಳ ದಿವ್ಯಮೌನ : ಜೂನ್ ತಿಂಗಳಿನಲ್ಲಿ ಸ್ಥಳೀಯರು ಈ ಬಗ್ಗೆ ಪೊಲೀಸ್ ಇಲಾಖೆಗೆ ಲಿಖಿತ ದೂರು ನೀಡಿದ್ದಾರೆ. ಬೀಟ್ ವ್ಯವಸ್ಥೆಯನ್ನು ಮಾಡುತ್ತೇವೆ ಎಂಬ ಭರವಸೆ ನೀಡಿದ್ದರೂ ವ್ಯವಸ್ಥೆಯನ್ನು ಮಾಡಿಲ್ಲ. ಸ್ಥಳೀಯರ ಒತ್ತಡದ ಮೇರೆಗೆ ಪಂಚಾಯತ್ ವತಿಯಿಂದ ಸೂಚನಾ ಫಲಕವನ್ನು ಹಾಕಲಾಗಿದೆ. ಆದರೂ ನಿಯಮ ಪಾಲನೆ ಆಗುತ್ತಿಲ್ಲ. ಕೆರೆಯ ಸುತ್ತಮುತ್ತ ಮದ್ಯದ ಬಾಟಲಿಗಳ ರಾಶಿ ಬೀಳುತ್ತಿದೆ. ಇದಕ್ಕೆ ಗಮನ ವಹಿಸಬೇಕಾದ ಪಂಚಾಯತ್ ಮೌನವಹಿಸಿದೆ. ಸ್ವಚ್ಚತಾ ಕಾರ್ಯದಲ್ಲಿ ಯುವಕರು : ಯಾರೂ ಇತ್ತ ಗಮನ ಹರಿಸಿದಾಗ ಸ್ಥಳೀಯ ಯುವಕರ ತಂಡವಾದ ಅಜ್ಜಿಲಕಾಡು ಫ್ರೆಂಡ್ಸ್ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಇವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Additional image Additional image Additional image
14 Feb 2021, 02:04 PM
Category: Kaup
Tags: