ಪ್ರೇಮಿಗಳ ದಿನಾಚರಣೆಯಂದು ಸ್ವಚ್ಛತಾ ಶ್ರಮದಾನ
Thumbnail
ಪ್ರೇಮಿಗಳ ದಿನಾಚರಣೆ ಯಂದು ಪರಿಸರ ಪ್ರೇಮಿಗಳಾಗೋಣ ಎಂಬ ಧೇಯವಾಕ್ಯದೊಂದಿಗೆ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದ ಬಂಟಕಲ್ಲು ಇವರ ಆಶ್ರಯದಲ್ಲಿ ಇಂದು ಬೆಳಿಗ್ಗೆ 7.30 ರಿಂದ 9.30 ರವರೆಗೆ ಶಿರ್ವ ಮಹಾಲಸ ನಾರಾಯಣಿ ದೇವಸ್ಥಾನದ ತಿರುವಿನಿಂದ ಶಿರ್ವ ಪೇಟೆಯ ಮುಖ್ಯ ರಸ್ತೆ ಎರಡು ಬದಿಗಳಲ್ಲಿ ಹರಡಿದ್ದ ತ್ಯಾಜ್ಯ,ಕಸ, ಪ್ಲಾಸ್ಟಿಕ್, ಹೆಕ್ಕುವ ಮೂಲಕ ಸ್ವಚ್ಚತೆ ಕಾರ್ಯಕ್ರಮ ನಡೆಯಿತು. ಡಾನ್ ಬೋಸ್ಕೊ ಶಾಲೆ ಮುಂಬಾಗ, ಅಂಚೆ ಕಛೇರಿ, ಸಮುದಾಯ ಆರೋಗ್ಯ ಕೇಂದ್ರ ಮುಂಬಾಗ, ಸಂತ ಮೇರಿ ಪ.ಪೂ ಕಾಲೇಜು ಮುಂಬಾಗ , ಶಾಂಭವಿ ಹೈಟ್ಸ್ ವರೆಗೆ ಸ್ವಚ್ಛತಾ ಕಾರ್ಯಕ್ರಮದೊಂದಿಗೆ , ಪ್ರೇಮಿಗಳ ದಿನಾಚರಣೆಯನ್ನು ಪರಿಸರ ಪ್ರೇಮಿಗಳಾಗಿ ಶ್ರಮದಾನ ನಡೆಯಿತು. ಯುವ ವೃಂದದ ಗೌರವಾಧ್ಯಕ್ಷ, ಗ್ರಾ.ಪಂ ಸದಸ್ಯ ಕೆ ಆರ್ ಪಾಟ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಕಾರ್ಯದರ್ಶಿ ಆಶಿಷ್ ಪಾಟ್ಕರ್, ಹಿರಿಯ ಶಿಕ್ಷಕ ದೇವದಾಸ ಪಾಟ್ಕರ್, ಸೇನಾನಿ ರಾಜೇಂದ್ರ ಪಾಟ್ಕರ್, ಲಯನ್ ಅನಂತರಾಮ ವಾಗ್ಲೆ, ವೀರೇಂದ್ರ ಪಾಟ್ಕರ್, ಯುವ ವೃಂದದ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು. ಸ್ಥಳೀಯರಾದ ಶ್ರೀನಿವಾಸ ಶೆಣೈಯವರು ಉಪಹಾರ, ಹಾಗೂ ಗಿರಿದರ್ ಪ್ರಭು ಶಿರ್ವ ರವರು ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.
Additional image Additional image
14 Feb 2021, 08:26 PM
Category: Kaup
Tags: