ಶಿರ್ವ : ಯೋಗಶಕ್ತ ರೋಗ ಮುಕ್ತ ಜೀವನ ಅಗತ್ಯ
Thumbnail
ಶಿರ್ವ:ಮಾನವ ಶರೀರವೇ ನಿಜವಾದ ಯೋಗ.ಅದನ್ನು ಸಮರ್ಪಕವಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಾದುದು ಅತೀ ಅಗತ್ಯ.ತನ್ನ ಜೀವನ ಶೈಲಿಯಲ್ಲಿ ಉತ್ತಮ ಆಹಾರದೊಂದಿಗೆ ವ್ಯಾಯಾಮವನ್ನು ದಿನ ನಿತ್ಯ ರೂಢಿಸಿಕೊಂಡರೆ ದೇಹ ಸ್ವಸ್ಥವಾಗಿ ರೋಗದಿಂದ ಮುಕ್ತವಾಗಲು ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿಯಾಗಿ ಬಂದ ಶ್ರೀರಂಜಿತ್ ಪುನರೂರು ಸಂತಮೇರಿ ಕಾಲೇಜಿನಲ್ಲಿ ಏರ್ಪಡಿಸಿದ ಮೂರು ದಿನದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ನುಡಿದರು. ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ದೈಹಿಕ ಸಾಮಥ್ರ್ಯ ಮತ್ತು ಯೋಗ ಕೋಶ-ಎನ್.ಸಿ.ಸಿ.ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಸಮಾಜ ಸೇವಕ ರಾಜ್ಯ ಪ್ರಶಸ್ತಿ ಪಡೇದ ಶ್ರೀ ಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೋನಿಸ್‍ರವರು ಪ್ರಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಶ್ರೀ ಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈ , ಶ್ರೀ ರಂಜಿತ್ ಪುನಾರ್, ಶ್ರೀ ಪ್ರಕಾಶ್ ಆಚಾರ್ಯ ಯೋಗಾಸನ ಶ್ಯೆಲಿಯನ್ನು ಪ್ರಾತ್ಯೆಕ್ಷೀಕೆಯ ಮೂಲಕ ಮಾಡಿತೋರಿಸಿದರು. ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ದೈಹಿಕ ಸಾಮಥ್ರ್ಯ ಮತ್ತು ಯೋಗ ಕೋಶ ಸಂಯೋಜಕ ಜೆಫ್ ಸನ್ನಿ ಡಿಸೋಜಾ, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಕು. ದೀಪ್ತಿ ಮತ್ತು ಬಳಗ ಪ್ರಾರ್ಥಿಸಿ, ಕು. ನವ್ಯ ಆಚಾರ್ಯ ಸ್ವಾಗತಿಸಿ, ಮುಖ್ಯ ಅಥಿತಿಗಳನ್ನು ಪರಿಚಯಿಸಿದರು. ಕು. ಶ್ರಾವ್ಯ ವಂದಿಸಿ, ಕು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
Additional image Additional image
16 Feb 2021, 02:13 PM
Category: Kaup
Tags: