ಸೀತಾ ನದಿಗೆ ವಿಷವಿಕ್ಕುವ ಸ್ಥಿತಿಗೆ ಅಂತ್ಯ ಯಾವಾಗ ...?
Thumbnail
ಬ್ರಹ್ಮಾವರ ಮಾಬುಕಳ ಸೀತಾನದಿ ಸೇತುವೆಯ ಎರಡೂ ಬದಿಯಲ್ಲಿ ಕಸದ ರಾಶಿಯೇ ನಿಮಾ೯ಣವಾಗಿದೆ. ಈ ಕಸವು ಸಾವಿರಾರು ಜನರಿಗೆ ನೀರು ಒದಗಿಸುವ ಸೀತಾ ನದಿಗೆ ಸೇರುತ್ತಿರುವುದು ಅತ್ಯಂತ ದುಃಖದ ವಿಚಾರ.ಸಾವ೯ಜಿಕರು ಎಲ್ಲೆoದಲ್ಲಿ ಪ್ಯಾಸ್ಟಿಕ್ ಸಹಿತ ಕಸಬಿಸಾಡುವ ಸ್ಥಿತಿಯಿಂದ ಜಲಚರಗಳು ಸೇರಿದಂತೆ ಸಾವಿರಾರು ಜನರಿಗೆ ವಿಷ ಸೇರುತ್ತಿದೆ. ಮೂರು ನಾಲ್ಕು ತಿಂಗಳ ಹಿಂದೆ ವಿವಿಧ ಸಂಘ ಸಂಸ್ಥೆಗಳು ಸೇರಿ ಸ್ವಚ್ಚತಾ ಕಾಯ೯ಕ್ರಮ ನಡೆಸಿ , ಸಾವ೯ಜನಿಕರಿಗೆ ಅರಿವು ಮೂಡಿಸಲು ಬ್ಯಾನರ್ ಅಳವಡಿಸಿದ್ದರು ಆದರೆ ಇದೀಗ ಬ್ಯಾನರ್ ಕಾಣಿಯಾಗಿದೆ ಈ ಸ್ಥಳದಲ್ಲಿ ಕಸದ ರಾಶಿಯೇ ನಿಮಾ೯ಣವಾಗಿದೆ! ಇಲ್ಲಿ ಬಿಸಾಡುವ ಕಸವನ್ನು ನಾಯಿಗಳು ರಸ್ತೆಯಲ್ಲಿ ಚೆಲ್ಲಾಡಿ ವಾಹನಗಳು ಸಂಚರಿಸಲು ಕಷ್ಟ ಪಡಬೇಕಾದ ಸ್ಥಿತಿ ನಿಮಾ೯ಣವಾಗಿದೆ. ಕಸದ ವಾಸನೆಯಿಂದ ರಸ್ತೆಯಲ್ಲಿ ನಡೆದಾಡುವವರು ಮೂಗು ಮುಚ್ಚಿ ಸಾಗಬೇಕಾದ ಪರಿಸ್ಥಿತಿಯಿದೆ. ಕಸ ಬಿಸಾಡುವವರಿಗೆ ಸರಿಯಾದ ಶಿಕ್ಷೆಯಾಗಲಿ : ಈ ಪರಿಸರದಲ್ಲಿ ಸಿಸಿ ಟಿವಿ ಅಳವಡಿಸಿ ಕಸ ಬಿಸಾಡುವ ದುರುಳರಿಗೆ ಶಿಕ್ಷೆ ನೀಡಬೇಕು. ಸಾವ೯ಜನಿಕರು ಕಸ ಬಿಸಾಡುವವರನ್ನು ನೋಡಿದಾಗ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟು ಜನ ಜಾಗೃತಿ ಮೂಡಿಸಬೇಕು. ಜಿಲ್ಲಾಡಳಿತ ಸೇರಿದಂತೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರವು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಈ ಪರಿಸರವನ್ನು ಅದೇ ರೀತಿ ನದಿಯನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಲೇಖಕ, ಸಮಾಜ ಸೇವಕ ರಾಘವೇಂದ್ರ ಪ್ರಭು,ಕವಾ೯ಲು ಒತ್ತಾಯಿಸಿದ್ದಾರೆ.
Additional image
19 Feb 2021, 10:23 PM
Category: Kaup
Tags: