ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿ ಬಿಡುಗಡೆ
Thumbnail
ಕಾಪು : ಕುಂಜೂರಿನ ಮೋಕೆದ ಕಲಾವಿದರು ಸಿದ್ಧಗೊಳಿಸಿದ ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿಯನ್ನು ಎಲ್ಲೂರು ಮಹತೋಭಾರ ದೇವರ ಸನ್ನಿಧಿಯಲ್ಲಿ ನೆರವೇರುತ್ತಿರುವ ಸೀಮೆಯ ರಾಶಿಪೂಜೆಯ ಸಂದರ್ಭ ಸೀಮೆಯ ತಂತ್ರಿಗಳಾದ ವೇ.ಮೂ . ಲಕ್ಷ್ಮೀನಾರಾಯಣ ತಂತ್ರಿಯವರು ಹಾಗೂ ಶ್ರೀ ಕೆ.ಎಲ್. ಕುಂಡತಾಯರವರು ಬಿಡುಗಡೆಗೊಳಿಸಿ ಹರಸಿದರು. ರಾಜೇಶ್ ಆರ್.ಕೆ ಸಾಹಿತ್ಯದಲ್ಲಿ , ರತ್ನಾಕರ ಆಚಾರ್ಯ ಕುಂಜೂರು ಮತ್ತು ರವಿರಾಜ್ ಕುಲಾಲ್ ಎರ್ಮಾಳ್ ರವರ ಗಾಯನವಿದೆ. ಸಿಡಿ ಬಿಡುಗಡೆ ಸಂದರ್ಭದಲ್ಲಿ ಎಲ್ಲೂರುಗುತ್ತು ಪ್ರಪುಲ್ಲ ಶೆಟ್ಟಿ, ನಡಿಮನೆ ದೇವರಾಜ್ ರಾವ್, ಎಲ್ಲೂರು ಯುವಕ ಮಂಡಲದ ಅಧ್ಯಕ್ಷರು ನಾಗರಾಜ್, ನಮ್ಮ ಕಾಪು ನ್ಯೂಸ್ ತಂಡದ ಉದಯ ಕುಲಾಲ ಉಪಸ್ಥಿತರಿದ್ದರು.
Additional image Additional image
23 Feb 2021, 08:24 PM
Category: Kaup
Tags: