ಕೆಮ್ರಾಲ್ ನಲ್ಲಿ ಜೆಜೆಎಮ್ ವತಿಯಿಂದ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ತರಬೇತಿ
Thumbnail
ಮಂಗಳೂರು : ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಪ್ ಚಾಲಕರ ಸಮೇತ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವವರ ಪಾತ್ರ ತುಂಬಾ ಮಹತ್ವದ್ದು ಎಂದು ಕೆಮ್ರಾಲ್ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅರುಣ್ ಶ್ಲಾಘಿಸಿದರು.ಅವರಿಂದು ದ.ಕ ಜಿಲ್ಲಾ ಪಂಚಾಯತ್ ,ಗ್ರಾಮೀಣ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆ ಮಂಗಳೂರು ,ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಸಮುದಾಯ ವತಿಯಿಂದ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಲ್ಕಿ ರಾಮಕೃಷ್ಣ ಪುಂಜ ಐಟಿಐ ಸಂಸ್ಥೆಯ ಕಿರಿಯ ತರಬೇತುದಾರ ವಿಲ್ಫ್ರೇಡ್ ಅವರು ಪಂಪ್ ಆಪರೇಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ನಂತರ ನಿರ್ಮಿತಿ ಕೇಂದ್ರದ ನವೀತ್ ಅವರು ವಾಟರ್ ಮೀಟರ್ ಕುರಿತು ವಿಷಯ ಮಂಡಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ ನರೇಂದ್ರ ಸಿ.ಆರ್ ಅವರು ಸಮಗ್ರ ಕುಡಿಯುವ ನೀರು ಸರಬರಾಜಿನ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಜಲಜೀವನ್ ಮಿಷನ್ ಇದರ ಸಮುದಾಯ ಸಂಸ್ಥೆಯ ಐಇಸಿ/ಹೆಚ್.ಆರ್.ಡಿ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಜೆಜೆಎಮ್ ಧ್ಯೇಯೋದ್ದೇಶಗಳ ಕುರಿತು ತಿಳಿಸಿದರು. ಇದೇ ಸಂದರ್ಭ ಸ್ವಚ್ಛ ಭಾರತ್ ಮಿಷನ್ ಇದರ ಶ್ರೀ ನವೀನ್ ಅವರು ನೀರು ನೈರ್ಮಲ್ಯದ ಕುರಿತು ಅರಿವು ಮೂಡಿಸಿದರು. ಈ ಸಂದರ್ಭ ಮಂಗಳೂರು ತಾಲೂಕಿನ 10 ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರು, ಕೆಮ್ರಾಲ್ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾ,ಉಪಾಧ್ಯಕ್ಷರು,ಸರ್ವ ಸದಸ್ಯರು, ಸ್ವಚ್ಛ ಭಾರತ್ ಮತ್ತು ಜೆಜೆಎಮ್ ಐಇಸಿ ಸಂಯೋಜಕರಾದ ಶ್ರೀ ಡೊಂಬಯ್ಯ ಮತ್ತು ಮಹಾಂತೇಶ್ ಹಿರೇಮಠ ಉಪಸ್ಥಿತರಿದ್ದರು. ಜೆಜೆಎಮ್ ಹೆಚ್.ಆರ್.ಡಿ ಫಲಹಾರೇಶ್ ಮಣ್ಣೂರಮಠ ಕಾರ್ಯಕ್ರಮ ಆಯೋಜಿಸಿದ್ದರು.
26 Feb 2021, 10:54 PM
Category: Kaup
Tags: