ಮಾನವೀಯ ನೆಲೆಯಲ್ಲಿ ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿಗೆ ನ್ಯಾಯ ದೊರಕಿಸುವಲ್ಲಿ ಮುಂದಿನ ಹೋರಾಟ : ಸಮಾನ ಮನಸ್ಕ ಬಿಲ್ಲವರು
Thumbnail
ಉಡುಪಿ : ಮಾರಣಾಂತಿಕವಾಗಿ ಹಲ್ಲೆಗೊಳಗಾದ ಬಾರಕೂರಿನ ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿಯವರು‌‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಮತ್ತು ಪದಾಧಿಕಾರಿಗಳಿಂದ ಫೆಬ್ರವರಿ 25ರಂದು ಮನವಿ ಸಲ್ಲಿಸಲಾಗಿದ್ದರೂ ದುಷ್ಕರ್ಮಿಗಳನ್ನು ಇನ್ನೂ ಬಂಧಿಸದಿರುವುದರಿಂದ ಇಂದು ಉಡುಪಿ ಬನ್ನಂಜೆ ಬಿಲ್ಲವ ಸಂಘದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಮಾನ ಮನಸ್ಕರು ಜೊತೆಯಾಗಿ ಸಭೆ ಸೇರಿದರು. ಈ ಸಂದರ್ಭ ಮಾತನಾಡಿದ ಉಡುಪಿ ಜಿಲ್ಲಾ ನಗರ ಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸಂಘಟಿತ ಹೋರಾಟದ ಮೂಲಕ ನಾವು ಮುಂದಿನ ಹೆಜ್ಜೆ ಇಡಬೇಕಾಗಿದೆ. ಹತಾಶೆ ಭಾವನೆಯನ್ನು ಬಿಟ್ಟು ಧನಾತ್ಮಕತೆಯಲ್ಲಿ ನಾವು ಮುನ್ನಡೆಯುವ ಎಂದರು. ರಾಮ ಮಾಸ್ಟರ್ ಶಂಕರ್ ಶಾಂತಿಯವರಿಗೆ ಧೈರ್ಯ ತುಂಬುವ ಕಾರ್ಯದೊಂದಿಗೆ ದುಷ್ಕರ್ಮಿಗಳನ್ನು ಪೋಲಿಸ್ ಇಲಾಖೆ ಬಂಧಿಸಿ ಸರಿಯಾದ ಶಿಕ್ಷೆ ಸಿಗುವವರೆಗೆ ಹೋರಾಡಬೇಕಿದೆ ಎಂದರು. ಸಮಾನ ಮನಸ್ಕರಾದ ಕಿರಣ್ ಮಾತನಾಡಿ ಶಂಕರ್‌ ಪೂಜಾರಿ ನಿಸ್ವಾರ್ಥ ಸಮಾಜ ಸೇವಕರಾಗಿ ಸಮಾಜದಲ್ಲಿಯ ಭೃಷ್ಟರ ಭೃಷ್ಟಾಚಾರವನ್ನು ಬಯಲಿಗೆಳೆಯುವ ಕಾರ್ಯ ಮಾಡುತ್ತಿದ್ದು ಅದರಿಂದ ಸಾರ್ವಜನಿಕರಿಗೆ ಉಪಯೋಗವಾಗಿದೆ. ಆದರೆ ಭೃಷ್ಟರಿಗೆ ಕಂಟಕವಾಗಿದೆ. ಹಲ್ಲೆ ಪೂರ್ವನಿಯೋಜಿತವಾಗಿದ್ದು, ಶಂಕರ ಶಾಂತಿಯವರಿಗೆ ನ್ಯಾಯ ಸಿಗುವವರೆಗೆ ಹೋರಾಡುವ ಎಂದರು. ಬಿಲ್ಲವ ಚಿಂತಕ‌ ದಯಾನಂದ ಉಗ್ಗೆಲ್ ಬೆಟ್ಟು ಮಾತನಾಡಿ ಸಮಾಜದಲ್ಲಿಯ ಅನ್ಯಾಯಕ್ಕೆ ತುಡಿಯುವ ಮನಸ್ಥಿತಿಯ ಶಂಕರ್ ಶಾಂತಿಯವರ ಹೋರಾಟ ಮುಂದೆಯೂ ಸಾಗಲು ನಾವೆಲ್ಲ ಅವರಿಗೆ ಧೈರ್ಯ ತುಂಬಬೇಕಾಗಿದೆ. ಕೆಲವು ಕ್ಷುಲ್ಲಕ ಮನಸಿನ ವ್ಯಕ್ತಿಗಳು ಈ ಹೋರಾಟದ‌ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದು ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ವಹಿಸಿ ಮಾತನಾಡಿ ಘಟನೆ ನಡೆದು 6 ದಿವಸವಾದರೂ ಇನ್ನೂ ದುಷ್ಕರ್ಮಿಗಳನ್ನು ಬಂಧಿಸದಿರುವುದು ಪೋಲಿಸ್ ಇಲಾಖೆಯ ಮೇಲೆ ನಮಗೆ ಅನುಮಾನ ಮೂಡಿಸುತ್ತಿದೆ. ಒಂದು ವೇಳೆ ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಉಪಸ್ಥಿತರಿದ್ದ ಸಮಾಜ ಬಾಂಧವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಪದಾಧಿಕಾರಿಗಳು, ಬಿಲ್ಲವ ಸಮಾಜದ ಸಮಾನ ಮನಸ್ಕರು ಉಪಸ್ಥಿತರಿದ್ದರು.
Additional image Additional image Additional image
27 Feb 2021, 11:16 AM
Category: Kaup
Tags: