92 ಹೇರೂರು : ಉಚಿತ ಚೆಂಡೆ ತರಬೇತಿ ತರಗತಿ ಶುಭಾರಂಭ
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 92ನೇ ಹೇರೂರು ಒಕ್ಕೂಟ ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ಹೇರೂರು, ಶ್ರೀ ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ ಹೇರೂರು, ದೇವಾಡಿಗರ ಸಂಘ ಹೇರೂರು ಬಂಟಕಲ್ಲು ಇವರ ಆಶ್ರಯದಲ್ಲಿ
ಉಚಿತ ಚೆಂಡೆ ತರಬೇತಿ ತರಗತಿ ಇಂದು ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಶ್ರೀ ಪುಂಡಲೀಕ ಮರಾಠ ನಿವೃತ್ತ ಶಿಕ್ಷಕರು ಹಾಗೂ ಹಿರಿಯ ಪತ್ರಕರ್ತರು ಬಂಟಕಲ್ಲು ಉದ್ಘಾಟಿಸಿ ಶುಭಹಾರೈಸಿದರು.
ಹೇರೂರು ಗ್ರಾಮದ ಸುಮಾರು 60 ಜನ ಮಕ್ಕಳು ಮಹಿಳೆಯರು ಪುರುಷರು ಚೆಂಡೆ ತರಬೇತಿ ತರಗತಿಯಲ್ಲಿ ತರಗತಿಯಲ್ಲಿ ಪಾಲ್ಗೊಂಡರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರ್ವ ವಲಯ ಮೇಲ್ವಿಚಾರಕರಾದ ಶ್ರೀಮತಿ ಪಲ್ಲವಿ ಶೆಟ್ಟಿ, ಚಂಡೆ ಹಾಗೂ ಭಜನಾ ತರಬೇತುದಾರರಾದ ರಾಘವೇಂದ್ರ ಭಟ್ ಮುಲ್ಕಾಡಿ ಪಂಜಿಮಾರು, ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ ಅಧ್ಯಕ್ಷರಾದ ಶ್ರೀ ಸುಜಿತ್ ಕುಮಾರ್, ದೇವಾಡಿಗರ ಸಂಘ 92 ಹೇರೂರು ಬಂಟಕಲ್ಲು ಅಧ್ಯಕ್ಷರಾದ ಶ್ರೀ ಜಯ ಸೇರಿಗಾರ್, ಶ್ರೀ ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ ಹೇರೂರು ಅಧ್ಯಕ್ಷರಾದ ಶ್ರೀಮತಿ ವಸಂತಿ ಆಚಾರ್ಯ ಶುಭಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 92 ಹೇರೂರು ಒಕ್ಕೂಟದ ಅಧ್ಯಕ್ಷರಾದ ಶ್ರೀ ದಿನೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ದಿನೇಶ್ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಪ್ರೀತಿ ಆಚಾರ್ಯರವರು ಪ್ರಾರ್ಥಿಸಿ, ಶ್ರೀಮತಿ ಸುಕನ್ಯಾ ಜೋಗಿಯವರು ಕಾರ್ಯಕ್ರಮ ನಿರೂಪಿಸಿ, ಉದಯ ದೇವಾಡಿಗ ವಂದಿಸಿದರು.
