ಎಲ್ಲೂರು : ಮಹಾ ಶಿವರಾತ್ರಿಯ ಪ್ರಯುಕ್ತ ನಿರಂತರ ಭಜನೆ
Thumbnail
ಎಲ್ಲೂರು ,ಮಾ.11: ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ 'ಮಹಾ ಶಿವರಾತ್ರಿ'ಯ ಪ್ರಯುಕ್ತ ವಿವಿಧ ಆಹ್ವಾನಿತ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಶ್ರೀ ವಿಶ್ವೇಶ್ವರ ದೇವಸ್ಥಾನ ಎಲ್ಲೂರು ಹಾಗೂ ಎಲ್ಲೂರು ಯುವಕ ಮಂಡಲ(ರಿ) ಜಂಟಿಯಾಗಿ ಹಮ್ಮಿಕೊಂಡಿದ್ದು ದೇವಳದ ಪವಿತ್ರಪಾಣಿ ಕೆ.ಎಲ್.ಕುಂಡಂತಾಯ ಮತ್ತು ಎಲ್ಲೂರುಗುತ್ತು ಪ್ರಪುಲ್ಲ ಶೆಟ್ಟಿ ಅವರು ಉದ್ಘಾಟಿಸಿದರು. ಪಂ.ಸದಸ್ಯ ವೈ.ರವಿರಾಜ್, ವಿಶ್ವೇಶ್ವರ ಭಜನಾ ಮಂಡಳಿಯ ಹಿರಿಯ ಸದಸ್ಯರಾದ ವೈ.ಸೀತಾರಾಮ ರಾವ್ ಹಾಗೂ ರಾಮಚಂದ್ರ ರಾವ್ , ನರಸಿಂಹ ಜೆನ್ನಿ , ಯುವಕ ಮಂಡಲದ ಅಧ್ಯಕ್ಷ ನಾಗೇಶ ಕೊಡಂಗೆ ಹಾಗೂ ಸದಸ್ಯರು ಭಾಗವಹಿಸಿದ್ದರು. ಪರಿಸರದ ಭಜನಾ ಮಂಡಳಿಗಳು ನಿರಂತರ ಭಜನೆಯಲ್ಲಿ ಪಾಲ್ಗೊಂಡವು.
11 Mar 2021, 02:55 PM
Category: Kaup
Tags: