ಮಾಚ್೯ 14 : ಕಾಪುವಿನ ಹೋಟೆಲ್ ಮಂದಾರ ಯಾತ್ರಿ ನಿವಾಸ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಕಾಪು : ಕಾಪುವಿನ ಹೋಟೆಲ್ ಮಂದಾರ ಯಾತ್ರಿ ನಿವಾಸ ವಠಾರದಲ್ಲಿ ಮಾಚ್೯ 14, ಆದಿತ್ಯವಾರ ಶ್ರೀಮತಿ ಮತ್ತು ಶ್ರೀ ರಶ್ಮಿಕಾಂತ್ ಶೆಟ್ಟಿ, ಶ್ರೀಮತಿ ಮತ್ತು ಶ್ರೀ ವಿನಯ್ ಶೆಟ್ಟಿ ನಂದಿಕೂರು ಇವರ ಸೇವಾರ್ಥವಾಗಿ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕಲಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮಂಗಳೂರು ಇವರಿಂದ ಸಂಜೆ 6ರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ಬಯಲಾಟವಾಗಿ ಆಡಿತೋರಿಸಲಿರುವರು.
ಅದೇ ದಿನ ಬೆಳಿಗ್ಗೆ 10 ಗಂಟೆಗೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
