ಕಾಪು ಶ್ರೀ ಮಾರಿಯಮ್ಮ ದೇವಸ್ಥಾನ ಆದಿಸ್ಥಳ ಶ್ರೀ ತ್ರಿಶಕ್ತಿ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವ
ಕಾಪು : ಕಾಪು ಶ್ರೀ ಮಾರಿಯಮ್ಮ ದೇವಸ್ಥಾನ ಆದಿಸ್ಥಳ ಶ್ರೀ ತ್ರಿಶಕ್ತಿ ಸನ್ನಿಧಿ ಕೋಟೆಮನೆ, ಮಲ್ಲಾರು, ಕಾಪು ಇಲ್ಲಿ ಮಾರ್ಚ್ 13, ಶನಿವಾರ ಮತ್ತು ಮಾರ್ಚ್ 14, ಆದಿತ್ಯವಾರ ವಾರ್ಷಿಕ ಮಹೋತ್ಸವ ಜರಗಲಿದೆ.
ಮಾರ್ಚ್ 13, ಶನಿವಾರದಂದು ಪ್ರಾತಃಕಾಲ ಪುಣ್ಯಾಹ ಶುದ್ಧಿ, ಸನ್ನಿಧಾನಕ್ಕೆ ಸಂಬಂಧಪಟ್ಟ ನಾಗನಿಗೆ ತನು ತಂಬಿಲ ಸೇವೆ. ಬೆಳಿಗ್ಗೆ 9:30 ಕ್ಕೆ ಮಹಾಗಣಪತಿ ಹೋಮ, ಸಾಯಂಕಾಲ 7:30 ರಿಂದ ಭಜನಾ ಕಾರ್ಯಕ್ರಮ. ರಾತ್ರಿ 8:30 ಕ್ಕೆ ಹೂವಿನ ಪೂಜೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಮಾಚ್೯14, ಆದಿತ್ಯವಾರದಂದು ಸ್ಥಳಶುದ್ಧಿ, ಪ್ರಾರ್ಥನೆ, ದೇವಿ ಪಾರಾಯಣ, ಕಲಶಾಭಿಷೇಕ, ಅಲಂಕಾರ ಪೂಜೆ. ಮಧ್ಯಾಹ್ನ 12:25 ಕ್ಕೆ ಚಂಡಿಕಾ ಪೂರ್ಣಾಹುತಿ, ಮಹಾಪೂಜೆ. ಮಧ್ಯಾಹ್ನ 1ಕ್ಕೆ ಬ್ರಾಹ್ಮಣಾರಾಧನೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
