ಮಾಚ್೯ 21 : ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಮಹೋತ್ಸವ
ಪಡುಬಿದ್ರಿ : ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಡುಬಿದ್ರಿಯ ಧ್ವಜಾರೋಹಣ ಮಾಚ್೯ 14, ಆದಿತ್ಯವಾರ ಜರಗಿದೆ.
ಮಾರ್ಚ್ 21 ರಂದು ಬೆಳಗ್ಗೆ 11ಕ್ಕೆ ರಥಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 11ಕ್ಕೆ ಮಹಾರಥೋತ್ಸವ ನಡೆಯಲಿದೆ.
ಮಾರ್ಚ್ 22 ಪ್ರಾತಃಕಾಲ 6:30 ಕವಾಟೋದ್ಘಾಟನೆ, ಬಲಿ ಉತ್ಸವ, ತುಲಾಭಾರ ಸೇವೆಗಳು ನಡೆಯಲಿದ್ದು. ಸಂಜೆ 4 ಕ್ಕೆ ಇತಿಹಾಸ ಪ್ರಸಿದ್ಧ ಚೆಂಡು, ರಾತ್ರಿ 7ಕ್ಕೆ ಅವಭೃತ ಸ್ನಾನ, ಬಲಿ ಕಟ್ಟೆ ಪೂಜೆ, ಸೂಟೆದಾರ, ಬಲಿ ಉತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
