ಬಳಕುಂಜೆಯಲ್ಲಿ ಜಲ ಸಮಸ್ಯೆಯ ಕುರಿತ ಕಿರುಚಿತ್ರ ಪ್ರದರ್ಶನ
ಮಂಗಳೂರು : ತಾಲೂಕಿನ ಬಳಕುಂಜ ಗ್ರಾಮ ಪಂಚಾಯತಿಯಲ್ಲಿ ದೇಶದ ವಿವಿಧ ಪ್ರದೇಶದಲ್ಲಿ ಇರುವ ನೀರಿನ ಅಭಾವದ ಕುರಿತು ಒಂದು ಕಿರು ಚಿತ್ರ ಪ್ರದರ್ಶನದ ಜೊತೆಗೆ Book ಎಂಬ ಕೃತಿ ಆಧಾರಿತ ಜಲದ ಸಮಸ್ಯೆಗೆ ಸಂಬಂಧಿಸಿದ ಕಿರುಚಿತ್ರವನ್ನು ಪ್ರದರ್ಶನ ಮಾಡಲಾಯಿತು.
ಮರುಭೂಮಿಯಲ್ಲಿ ದಾಹದಿಂದ ಸುತ್ತಾಡುವ ವ್ಯಕ್ತಿಗೆ ಹ್ಯಾಂಡ್ ಪಂಪ್ ಸಿಕ್ಕಾಗ, ಎಷ್ಟೇ ಪಂಪ್ ಮಾಡಿದರೂ ನೀರು ಸಿಗದೇ ಇದ್ದಾಗ ಮರಕ್ಕೆ ನೇತು ಹಾಕಿದ ಒಂದು ಅಶುದ್ಧ ನೀರಿನ ಬಾಟಲಿ ಸಿಕ್ಕಿ, ಅದರ ಕೆಳಗೆ ತೆಲುಗು ಲಿಪಿಯಲ್ಲಿ ಬರೆದಿರುವ (ಈ ನೀರನ್ನು ಪಂಪಿಗೆ ಹಾಕಿ ಆಗ ಶುದ್ಧ ನೀರು ಸಿಗುತ್ತದೆ) ವಾಕ್ಯ ನೋಡಿ ಆ ವ್ಯಕ್ತಿ ಹಾಕುವುದು. ಬಳಿಕ ಶುದ್ಧವಾದ ನೀರು ಲಭ್ಯವಾಗುವ ಸಂದೇಶ ನಿರ್ಮಿತ ಅದ್ಭುತ ಕಿರುಚಿತ್ರ ಇದಾಗಿತ್ತು. ನೆರೆದಿದ್ದ ಎಲ್ಲರಿಂದಲೂ ಈ ಕಿರುಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
