ಆರ್ರ್ಯಾಡಿ ದಿ| ಅಂಚನ್ ಅವರ 5ನೇ ವರ್ಷದ ಸಂಸ್ಮರಣಾರ್ಥ ಪುತ್ರರಿಂದ 14 ಅಶಕ್ತ ಕುಟುಂಬಗಳಿಗೆ ಸುಮಾರು 1.50 ಲಕ್ಷ ರೂ. ವೈದ್ಯಕೀಯ ನೆರವಿನ ಹಸ್ತ
ಕಟಪಾಡಿ : ಆರ್ರ್ಯಾಡಿ ದಿ| ಅಂಚನ್ ಅವರ 5ನೇ ವರ್ಷದ ಸಂಸ್ಮರಣಾರ್ಥ ಪುತ್ರರಾದ ಸುರೇಂದ್ರ ಅಂಚನ್, ಸುಜಿತ್ ಅಂಚನ್, ಸುಕುಮಾರ್ ಅಂಚನ್ ಅವರು ವೈದ್ಯಕೀಯ ಚಿಕಿತ್ಸೆ ವೆಚ್ಚಕ್ಕಾಗಿ ಅಶಕ್ತ 14 ಬಡ ಕುಟುಂಬಗಳಿಗೆ ಸುಮಾರು 1.50 ಲಕ್ಷ ರೂ. ಸಹಾಯ ಧನವನ್ನು ಮಾ.21ರಂದು ವಿತರಿಸಿದರು.
ದಿ| ಸುಂದರ ಅಂಚನ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನೀಡಲಾದ ಈ ಸಹಾಯಧನವನ್ನು ಪಾಂಗಾಳ ಆರ್ರ್ಯಾಡಿಯ ಅಂಚನ್ಸ್ ನಲ್ಲಿ ಪತ್ನಿ ಜಾನಕಿ ಸುಂದರ ಅಂಚನ್ ಅವರು, ಅನಾರೋಗ್ಯ ಪೀಡಿತ ಅಶಕ್ತ ಕುಟುಂಬಗಳಾದ ಸಂಗೀತಾ ಉಪ್ಪೂರು, ಜೂಲಿಯನ ಪಿರೇರಾ ಶಿರ್ವ, ಲೀಲಾ ಪೂಜಾರ್ತಿ ಗಾಂಧಿನಗರ ಪಾಂಗಾಳ, ಗಂಗಿ ಪೂಜಾರ್ತಿ ಪಾಂಗಾಳ, ವಾಸುದೇವ ಆಚಾರ್ಯ ಪಾಂಗಾಳ, ಅಚ್ಯುತ ಆಚಾರ್ಯ ಇನ್ನಂಜೆ, ವಿಜಯಾ ಕುರ್ಕಾಲು, ಸೂರು ಮೂಲ್ಯ ಇನ್ನಂಜೆ, ಪ್ರೇಮ ಶಂಕರಪುರ, ರಕ್ಷಿತ್ ಸಾಲ್ಯಾನ್ ಹೆಜಮಾಡಿ ಸಹಿತ 14 ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಯ ಸಹಾಯ ಧನದ ಚೆಕ್ ನ್ನು ವಿತರಿಸಿದರು.
ಈ ಸಂದರ್ಭ ದಿವ್ಯಾ ಸುರೇಂದ್ರ, ಕೃಪಾ ಸುಜಿತ್, ಮಹೇಶ ಎಂ. ಸುವರ್ಣ, ತಾ.ಪಂ. ಸದಸ್ಯ ರಾಜೇಶ್ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಸುರೇಖಾ ಶೆಟ್ಟಿ, ಪ್ರವೀಣ್ ಪೂಜಾರಿ ಕುರ್ಕಾಲು, ರಾಜೇಶ್ ಆಚಾರ್ಯ, ಸತ್ಯದ ತುಳುವೆರ್ ಸಂಘಟನೆಯ ಅಧ್ಯಕ್ಷ ಪ್ರವೀಣ್ ಬಂಗೇರ ಮಲ್ಪೆ ಉಪಸ್ಥಿತರಿದ್ದರು. ಜಿ.ಪಂ. ಸದಸ್ಯೆ ಗೀತಾಂಜಲಿ ಎಂ.ಸುವರ್ಣ ಸ್ವಾಗತಿಸಿದರು.ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಾಡಳಿತ ಮಂಡಳಿಯ ಸದಸ್ಯ ಕಾಮ್ ರಾಜ್ ಸುವರ್ಣ ವಂದಿಸಿದರು.
